ETV Bharat / city

ಬಂಟ್ವಾಳ: ಮೃತಪಟ್ಟ 6 ತಿಂಗಳ ಬಳಿಕ ಬಂತು ಕೊರೊನಾ ವ್ಯಾಕ್ಸಿನ್​ ಪೂರ್ಣಗೊಂಡ SMS - Corona vaccination completion message after 6 months of death

ತಂದೆಗೆ ಮಾರ್ಚ್ 24ರಂದು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಲಸಿಕೆಯ ಪ್ರಥಮ ಡೋಸ್ ನೀಡಲಾಗಿತ್ತು. ಏಪ್ರಿಲ್ 27ರಂದು ಅವರು ಮೃತಪಟ್ಟಿದ್ದಾರೆ. ಅಕ್ಟೋಬರ್ 14ರಂದು ನನ್ನ ಮೊಬೈಲ್​ಗೆ ಒಟಿಪಿ ಬಂದಿದ್ದು, ಬಳಿಕ ಈ ಎಸ್ಎಂಎಸ್ ಬಂದಿದೆ ಎಂದು ಮೃತರ ಪುತ್ರ ಹೇಳಿದ್ದಾರೆ.

ಮೃತಪಟ್ಟ 6 ತಿಂಗಳ ಬಳಿಕ ಬಂತು ಕೊರೊನಾ ವ್ಯಾಕ್ಸಿನ್​ ಪೂರ್ಣಗೊಂಡ SMS

author img

By

Published : Oct 26, 2021, 9:30 PM IST

ಬಂಟ್ವಾಳ: ಆರು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬರಿಗೆ ಕೋವಿಡ್-19 ಲಸಿಕೆಯ ಎರಡನೇ ಡೋಸ್ ನೀಡಲಾಗಿದೆ ಎಂಬ ಎಸ್​ಎಂಎಸ್ ಬಂದಿದೆ ಎಂದು ಮೃತರ ಪುತ್ರ ಆರೋಪಿಸಿದ್ದಾರೆ.

ತಾಲೂಕಿನ ಮಾಣಿ ಸಮೀಪದ ಮಿತ್ತೂರು ಅಕ್ಕರೆ ನಿವಾಸಿ ಹಸೈನಾರ್ ಎಂಬವರು ಏಪ್ರಿಲ್ 27ರಂದು ಮೃತಪಟ್ಟಿದ್ದಾರೆ. ಅಕ್ಟೋಬರ್ 14ರಂದು ಅವರಿಗೆ ಕೋವಿಡ್ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಎಸ್ಎಂಎಸ್ ಬಂದಿದೆ ಎಂದು ಮೃತ ಹಸೈನಾರ್ ಅವರ ಪುತ್ರ ಸಾದಿಕ್ ಆರೋಪಿಸಿದ್ದಾರೆ.

ಕೊರೊನಾ ವ್ಯಾಕ್ಸಿನ್​ ಪೂರ್ಣಗೊಂಡ SMS
ಕೊರೊನಾ ವ್ಯಾಕ್ಸಿನ್​ ಪೂರ್ಣಗೊಂಡ SMS

ತಂದೆಗೆ ಮಾರ್ಚ್ 24ರಂದು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಲಸಿಕೆಯ ಪ್ರಥಮ ಡೋಸ್ ನೀಡಲಾಗಿತ್ತು. ಏಪ್ರಿಲ್ 27ರಂದು ಅವರು ಮೃತಪಟ್ಟಿದ್ದಾರೆ. ಅಕ್ಟೋಬರ್ 14ರಂದು ನನ್ನ ಮೊಬೈಲ್​ಗೆ ಒಟಿಪಿ ಬಂದಿದ್ದು, ಬಳಿಕ ಈ ಎಸ್ಎಂಎಸ್ ಬಂದಿದೆ ಎಂದು ಹೇಳಿದ್ದಾರೆ.

ಎಸ್ಎಂಎಸ್ ಓದಿದಾಗ ನನ್ನ ತಂದೆಗೆ ಎರಡನೇ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಇತ್ತು. ಬಳಿಕ ನಾನು ಲಿಂಕ್ ಓಪನ್ ಮಾಡಿ ಪಿಡಿಎಫ್ ಪರಿಶೀಲಿಸಿದಾಗ ಅದರಲ್ಲೂ ಎರಡನೇ ಡೋಸ್ ನೀಡಿರುವ ಬಗ್ಗೆ ದೃಢಪಡಿಸಲಾಗಿದೆ ಎಂದು ಸಾದಿಕ್ ತಿಳಿಸಿದ್ದಾರೆ.

ಎರಡು ತಿಂಗಳ ಹಿಂದೆ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನನ್ನ ಮೊಬೈಲ್​ಗೆ ಕರೆಯೊಂದು ಬಂದಿತ್ತು. ಕರೆ ಮಾಡಿದವರು ತಂದೆಗೆ ಎರಡನೇ ಡೋಸ್ ನೀಡುವಂತೆ ಹೇಳಿದರು. ತಂದೆ ನಿಧನರಾದ ಬಗ್ಗೆ ನಾನು ಅವರಿಗೆ ತಿಳಿಸಿದ್ದೆ. ಆದರೂ ತಂದೆಗೆ ಎರಡನೇ ಡೋಸ್ ನೀಡಿರುವ ಸಂದೇಶ ಬಂದಿರುವುದು ಹೇಗೆ ಎಂದು ನನಗೆ ತಿಳಿದಿಲ್ಲ ಎಂದು ಸಾದಿಕ್ ಹೇಳಿದ್ದಾರೆ.

ಓದಿ: ಹಾಸನದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ.. "ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ನನ್ನ ಬಲಿದಾನ ದಾರಿ ದೀಪವಾಗಲಿ"

ETV Bharat Logo

Copyright © 2025 Ushodaya Enterprises Pvt. Ltd., All Rights Reserved.