ETV Bharat / city

ಮಂಗಳೂರು: ಶಿಥಿಲಾವಸ್ಥೆ ಕಟ್ಟಡಗಳ ತೆರವಿಗೆ ಕೊರೊನಾ ಅಡ್ಡಿ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀಳುವ ಹಂತದಲ್ಲಿ ಇರುವ ಕಟ್ಟಡಗಳನ್ನು ಗುರುತಿಸಿ ತೆರವು ಕಾರ್ಯಾಚರಣೆಗೆ ಈ ಕೋವಿಡ್​​ ಅಡ್ಡಗಾಲಾಗಿ ನಿಂತಿದೆ.

Mangalore city
ಮಂಗಳೂರು ನಗರ
author img

By

Published : Sep 2, 2020, 5:57 PM IST

ಮಂಗಳೂರು: ನಗರಗಳಲ್ಲಿ ವರ್ಷಗಳು ಕಳೆದಂತೆ ಕಟ್ಟಡಗಳು ಹಳೆಯದಾಗಿ ಶಿಥಿಲಾವಸ್ಥೆಗೆ ತಲುಪುತ್ತಿದ್ದು, ಅಂತಹ ಕಟ್ಟಡಗಳನ್ನು ಗುರುತಿಸಿ ಪ್ರತಿ ಮಳೆಗಾಲದ ಸಂದರ್ಭದಲ್ಲಿ ಕೆಡವಲು ಮಂಗಳೂರು ಮಹಾನಗರ ಸೂಚಿಸುತ್ತದೆ. ಆದರೆ, ಈ ಬಾರಿ ಕೊರೊನಾ ಕಾರಣದಿಂದ ಈ ಕಾರ್ಯ ನೆನೆಗುದಿಗೆ ಬಿದ್ದಿದೆ.

ಶಿಥಿಲಾವಸ್ಥೆಯ ಕಟ್ಟಡಗಳು ಯಾವತ್ತೂ ಅಪಾಯಕಾರಿ. ಪಾಲಿಕೆ ಸಿಬ್ಬಂದಿ ಕೊರೊನಾ ಕೆಲಸಗಳಲ್ಲಿ ನಿರತರಾಗಿದ್ದು, ಅಂತಹ ಕಟ್ಟಡಗಳನ್ನು ಗುರುತಿಸಿ ಕೆಡವಲು ಈ ಬಾರಿ ಕೊರೊನಾ ಅಡ್ಡಿಯಾಗಿದೆ. ಕಳೆದ ವರ್ಷ 2 ಕಟ್ಟಡಗಳನ್ನು ತೆರವುಗೊಳಿಸಲಾಗಿತ್ತು.

ಮೇಯರ್​ ದಿವಾಕರ್​​

ಪಾಲಿಕೆಯ ಸೆಂಟ್ರಲ್ ಮಾರುಕಟ್ಟೆ ಕಟ್ಟಡ ಕೆಡವಲು ಪಾಲಿಕೆ ಮುಂದಾಗಿತ್ತು. ಆದರೆ ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಆ ಕಾರ್ಯ ಸ್ಥಗಿತವಾಗಿದೆ. ಪಾಲಿಕೆ ವ್ಯಾಪ್ತಿಯ ಕಟ್ಟಡಗಳನ್ನು ತೆರವುಗೊಳಿಸಲು ಗುರುತಿಸಲ್ಪಡದೆ ಇರುವುದು ಅಪಾಯಕ್ಕೆ ಎಡೆಮಾಡಿದೆ. ಪಾಲಿಕೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.