ETV Bharat / city

ಎಲೆಯಲ್ಲಿ 'ಅರಳಿ'ದ ಬಿಎಸ್​ವೈ: ಕಲಾವಿದನ ವಿದ್ಯಾಭ್ಯಾಸಕ್ಕೆ ಲಕ್ಷ ರೂ. ಘೋಷಿಸಿದ ಸಿಎಂ - ಅಕ್ಷಯ್ ಕೋಟ್ಯಾನ್​ಗೆ 1ಲಕ್ಷ ರೂ ಘೋಷಿಸಿದ ಯಡಿಯೂರಪ್ಪ

ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿಶ್ವಲ್ ಆರ್ಟ್ಸ್​ನ ಮೂರನೇ ವರ್ಷದ ವಿದ್ಯಾರ್ಥಿ ಅಕ್ಷಯ್ ಕೋಟ್ಯಾನ್ ಮೂಡಬಿದಿರೆ, ಅರಳಿ ಎಲೆಯಲ್ಲಿ ಸಿಎಂ ಚಿತ್ರ ಬಿಡಿಸಿದ್ದಾರೆ‌. ನಿನ್ನೆ ಸಿಎಂ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಈ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರು. ಚಿತ್ರವನ್ನು ನೋಡಿ ಮೆಚ್ಚುಗೆಯ ಮಾತನಾಡಿ, ವಿದ್ಯಾರ್ಥಿ ಕಲಾವಿದ ಅಕ್ಷಯ್ ಕೋಟ್ಯಾನ್ ಮುಂದಿನ ಶಿಕ್ಷಣಕ್ಕೆ ನೆರವಾಗುವ ಹಿನ್ನೆಲೆಯಲ್ಲಿ 1 ಲಕ್ಷ ರೂ. ಪ್ರೋತ್ಸಾಹ ಧನ ಘೋಷಣೆ ಮಾಡಿದ್ದಾರೆ‌.

CM Yedyurappa art
ಯಡಿಯೂರಪ್ಪ
author img

By

Published : Sep 28, 2020, 4:32 PM IST

ಮಂಗಳೂರು: ಯುವ ಕಲಾವಿದನೊಬ್ಬ ಅಶ್ವತ್ಥ ವೃಕ್ಷದ ಎಲೆಯನ್ನು ಕಲಾತ್ಮಕವಾಗಿ ಕತ್ತರಿಸಿ ಸಿಎಂ ಯಡಿಯೂರಪ್ಪರ ಚಿತ್ರ ಬಿಡಿಸಿ ಅವರಿಗೆ ಉಡುಗೊರೆ ನೀಡಿದ್ದು, ಚಿತ್ರವನ್ನು ನೋಡಿ ಫಿದಾ ಆದ ಬಿಎಸ್​ವೈ ಕಲಾವಿದನ ಮುಂದಿನ ವಿದ್ಯಾಭ್ಯಾಸಕ್ಕೆ 1 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಿದ್ದಾರೆ‌.

CM Yedyurappa art
ಅಶ್ವತ್ಥ ಎಲೆಯಲ್ಲು ಬಿಎಸ್​ವೈ ಚಿತ್ರ ಬಿಡಿಸಿದ ಕಲಾವಿದ

ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ದೃಶ್ಯ ಕಲಾ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿ ಅಕ್ಷಯ್ ಕೋಟ್ಯಾನ್ ಮೂಡಬಿದಿರೆ, ಅರಳಿ ಎಲೆಯಲ್ಲಿ ಸಿಎಂ ಚಿತ್ರ ಬಿಡಿಸಿದ್ದಾರೆ‌. ನಿನ್ನೆ ಸಿಎಂ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಈ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರು. ಚಿತ್ರವನ್ನು ನೋಡಿ ಮೆಚ್ಚುಗೆ ಮಾತನಾಡಿ, ಕಲಾವಿದ ಅಕ್ಷಯ್ ಕೋಟ್ಯಾನ್ ಮುಂದಿನ ಶಿಕ್ಷಣಕ್ಕೆ ನೆರವಾಗುವ ಹಿನ್ನೆಲೆಯಲ್ಲಿ 1 ಲಕ್ಷ ರೂ. ಪ್ರೋತ್ಸಾಹ ಧನ ಘೋಷಣೆ ಮಾಡಿದ್ದಾರೆ‌.

CM Yedyurappa art
ನರೇಂದ್ರ ಮೋದಿ
CM Yedyurappa art
ಹರೀಶ್​ ಪೂಂಜಾ

ಅಕ್ಷಯ್ ಕೋಟ್ಯಾನ್ ಈ ಹಿಂದೆ ಇದೇ ಲೀಫ್ ಆರ್ಟ್ ಮೂಲಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಚಿತ್ರ ಬಿಡಿಸಿದ್ದರಂತೆ. ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ ಹರೀಶ್ ಪೂಂಜಾ, ಸಿಎಂ ಯಡಿಯೂರಪ್ಪ ಅವರ ಚಿತ್ರ ಬಿಡಿಸುವಂತೆ ಹೇಳಿದ್ದರಂತೆ. ಹಾಗಾಗಿ ಅಕ್ಷಯ್ ಈ ಚಿತ್ರ ಬಿಡಿಸಿದ್ದಾಗಿ ಹೇಳುತ್ತಾರೆ. ಸೆ.22ರಂದು ಅಶ್ವತ್ಥ ವೃಕ್ಷದಲ್ಲಿ ಈ ಚಿತ್ರ ಬಿಡಿಸಿದ್ದು, ಅದಕ್ಕೆ ಫ್ರೇಮ್ ಹಾಕಿ ನಿನ್ನೆ ಶಾಸಕ ಹರೀಶ್ ಪೂಂಜಾ ಅವರ ಜೊತೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಉಡುಗೊರೆ ನೀಡಿದ್ದಾರೆ.

CM Yedyurappa art
ಬಿಎಸ್​ವೈಗೆ ಚಿತ್ರ ಹಸ್ತಾಂತರ
CM Yedyurappa art
ಚಿತ್ರ ನೋಡುತ್ತಿರುವ ಸಿಎಂ

ಅಕ್ಷಯ್ ಕೋಟ್ಯಾನ್ ತಮ್ಮ 4ನೇ ತರಗತಿಯಿಂದಲೇ ಚಿತ್ರ ಕಲೆಯಲ್ಲಿ ಆಸಕ್ತಿ ಹೊಂದಿದ್ದಾರಂತೆ. ಅಂದು ಸಾರ್ವಜನಿಕ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಗಣೇಶನ ಚಿತ್ರ ಬಿಡಿಸಿ ಪ್ರಥಮ ಬಹುಮಾನ ಪಡೆದ ಬಳಿಕ ಚಿತ್ರಕಲೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಡಿದ್ದರೆಂದು ಅಕ್ಷಯ್ ಹೇಳುತ್ತಾರೆ.

ಅಶ್ವತ್ಥ ಎಲೆಯಲ್ಲಿ ಮೂಡಿದ ಯಡಿಯೂರಪ್ಪ
CM Yedyurappa art
ಡಾ. ವೀರೇಂದ್ರ ಹೆಗ್ಗಡೆ

ಅಕ್ಷಯ್ ಕೋಟ್ಯಾನ್ ಪಿಯುಸಿ ಬಳಿಕ ಬಿಕಾಂಗೆ ಸೇರಿದ್ದರೂ, ಚಿತ್ರಕಲೆಯನ್ನು ಬಿಡಲಾಗದೇ ಒಂದು ವರ್ಷದ ಬಳಿಕ ಬಿಕಾಂ ಪದವಿ ಮೊಟಕುಗೊಳಿಸಿ ವಿಶ್ವಲ್ ಆರ್ಟ್ಸ್ ತರಬೇತಿಗೆ ಮೂಡುಬಿದಿರೆಯ ಆಳ್ವಾಸ್ ಕಾಲೇಜಿಗೆ ಸೇರಿದ್ದಾರಂತೆ. ಇದೀಗ ಐದಾರು ತಿಂಗಳಿನಿಂದ ಲೀಫ್ ಆರ್ಟ್ ಬಗ್ಗೆ ಅವರು ಆಸಕ್ತರಾಗಿದ್ದು, ಈಗಾಗಲೇ ಅಶ್ವತ್ಥ ವೃಕ್ಷದ ಎಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ವಿಆರ್​ಎಲ್ ಸಮೂಹ ಸಂಸ್ಥೆಯ ಸಂಸ್ಥಾಪಕ‌ ಡಾ.ವಿಜಯ ಸಂಕೇಶ್ವರ ಮತ್ತಿತರ ಗಣ್ಯರ ಚಿತ್ರ ರಚಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂದೆ ಅಕ್ಷಯ್ ಕೋಟ್ಯಾನ್ ಚಿತ್ರಕಲೆಯಲ್ಲಿಯೇ ಸಾಧನೆ ಮಾಡಬೇಕೆಂದು ಉದ್ದೇಶ ಹೊಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.