ETV Bharat / city

ಮಗು ಅದಲು ಬದಲು ಪ್ರಕರಣ: ಡಿಎನ್ಎ ವರದಿ ಬರುವ ಮೊದಲೇ ಹಸುಳೆ ಸಾವು - DNA report before child died

ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ತಿಂಗಳ ಹಿಂದೆ ಹಿಂದೆ ನಡೆದ ಮಗು ಅದಲು ಬದಲು ಪ್ರಕರಣದ ಮಗುವೊಂದು ಡಿಎನ್ಎ ವರದಿ ಬರುವ ಮೊದಲೇ ಸಾವನ್ನಪ್ಪಿದೆ.

child exchange case
ಮಗು ಅದಲು ಬದಲು ಪ್ರಕರಣ
author img

By

Published : Nov 15, 2021, 6:06 PM IST

ಮಂಗಳೂರು: ತಿಂಗಳ ಹಿಂದೆ ನಡೆದ ಮಗು ಅದಲು ಬದಲು ಪ್ರಕರಣದಲ್ಲಿ ಸುದ್ದಿಯಾಗಿದ್ದ ಮಗುವೊಂದು ಡಿಎನ್ಎ ವರದಿ ಬರುವ ಮೊದಲೇ ಸಾವನ್ನಪ್ಪಿದೆ.

ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ತಿಂಗಳ ಹಿಂದೆ ಮಗು ಅದಲು ಬದಲು ಪ್ರಕರಣ ನಡೆದಿತ್ತು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಹಿಳೆಯೊಬ್ಬಳು ಅ.15ರಂದು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ವೈದ್ಯರು ಹೆಣ್ಣು ಮಗು ಎಂದು ಹೇಳಿದ್ದರು ಎನ್ನಲಾಗಿದೆ.

ಮಗುವಿಗೆ ಉಸಿರಾಟ ತೊಂದರೆ ಕಾರಣ ಐಸಿಯುನಲ್ಲಿಡಲಾಗಿತ್ತು. ಬಳಿಕ ಪೋಷಕರ ಕೈಗೆ ಮಗುವನ್ನು ನೀಡಲಾಗಿದೆ. ಈ ವೇಳೆ ಪರಿಶೀಲಿಸಿದಾಗ ಗಂಡು ಮಗುವನ್ನು ನೀಡಲಾಗಿತ್ತು. ಮಗು ಬದಲಾದ ಬಗ್ಗೆ ವೈದ್ಯರ ಗಮನಕ್ಕೆ ತಂದಾಗ, ಗಂಡು ಮಗುವೇ ಜನಿಸಿದೆ. ದಾಖಲೆಯಲ್ಲಿ ಹೆಣ್ಣು ಎಂದು ತಪ್ಪಾಗಿ ನಮೂದಿಸಲಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಹೆರಿಗೆಯಾದಾಗ ಹೆಣ್ಣು ಮಗು.. ಪೋಷಕರ ಕೈಗೆ ಕೊಟ್ಟದ್ದು ಗಂಡು ಮಗು.. ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಎಡವಟ್ಟು..

ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪೋಷಕರು ಹೆಣ್ಣು ಮಗುವನ್ನೇ ನೀಡಲು ಆಗ್ರಹಿಸಿದ್ದರು. ಅಲ್ಲದೇ, ಈ ಬಗ್ಗೆ ಮಂಗಳೂರಿನ ಬಂದರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮಗುವಿನ ಪೋಷಕರ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮಗುವಿನ ಡಿಎನ್‌ಎ ಮಾದರಿಯನ್ನು ಪರೀಕ್ಷೆಗಾಗಿ ಹೈದರಾಬಾದ್​ಗೆ ಕಳುಹಿಸಿಕೊಡಲಾಗಿತ್ತು. ಆದರೆ, ಡಿಎನ್ಎ ಪರೀಕ್ಷೆಯ ವರದಿ ಬರುವ ಮುನ್ನವೇ ಮಗು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.