ETV Bharat / city

ಎಸ್​ಡಿಪಿಐ ಕಾರ್ಯಕರ್ತರ ಬಂಧನ ಖಂಡಿಸಿ 'ಎಸ್​ಪಿ ಕಚೇರಿ ಚಲೋ' ಪ್ರತಿಭಟನೆ

author img

By

Published : Jan 15, 2021, 7:50 PM IST

ಗ್ರಾ.ಪಂ.ಚುನಾವಣೆ ವಿಜಯೋತ್ಸವ ವಿಜಯೋತ್ಸವ ಸಂದರ್ಭದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಎಸ್​ಡಿಪಿಐ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ ಎಸ್​ಡಿಪಿಐ ವತಿಯಿಂದ ಚಲೋ ಪ್ರತಿಭಟನೆ ನಡೆಸಲಾಯಿತು.

chalo-protest-by-sdpi-at-mangalore
ಎಸ್​ಡಿಪಿಐ ಕಾರ್ಯಕರ್ತರ ಬಂಧನ ಖಂಡಿಸಿ ಎಸ್​ಪಿ ಕಚೇರಿಯವರೆಗೂ ಚಲೋ ಪ್ರತಿಭಟನೆ

ಮಂಗಳೂರು: ಗ್ರಾಮ ಪಂಚಾಯತಿ ಚುನಾವಣೆಯ ವಿಜಯೋತ್ಸವ ಸಂದರ್ಭದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದಡಿ ಮೂವರು ಎಸ್​ಡಿಪಿಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದನ್ನು ಖಂಡಿಸಿ ಇಂದು ಎಸ್​ಡಿಪಿಐ ವತಿಯಿಂದ ಎಸ್​ಪಿ ಕಚೇರಿಯವರೆಗೂ ಪ್ರತಿಭಟನೆ ನಡೆಸಲಾಯಿತು.

ಮಧ್ಯಾಹ್ನ 2.30 ಸುಮಾರಿಗೆ ಕ್ಲಾಕ್ ಟವರ್ ಮುಂಭಾಗ ಸುಮಾರು ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ ಎಸ್​ಡಿಪಿಐ ಕಾರ್ಯಕರ್ತರು, ಬಂಧಿತ ಅಮಾಯಕರನ್ನು ಬಿಡುಗಡೆ ಮಾಡಬೇಕು. ನೈಜ ಆರೋಪಿಗಳಾದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕು ಹಾಗೂ ಕರ್ತವ್ಯಲೋಪ ಎಸಗಿರುವ ಬೆಳ್ತಂಗಡಿ ಎಸ್ಐಯನ್ನು ಅಮಾನತು ಮಾಡಬೇಕೆಂದು ಘೋಷಣೆ ಕೂಗಿದರು.

ಘೋಷಣೆ ಕೂಗುತ್ತಾ ಪ್ರತಿಭಟನಾಕಾರರು ಎಸ್​ಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದು, ಪೊಲೀಸರು ಬ್ಯಾರಿಕೇಡ್‌ ಹಾಕಿ ಅರ್ಧದಲ್ಲಿಯೇ ತಡೆದರು. ಈ ವೇಳೆ ಪ್ರತಿಭಟನಾಕಾರರು ರಸ್ತೆಯಲ್ಲಿಯೇ ಕುಳಿತು, ಸ್ಥಳಕ್ಕೆ ಐಜಿಯವರು ಬರಬೇಕೆಂದು ಒತ್ತಾಯಿಸಿದರು.

ಓದಿ: ಯತ್ನಾಳ್‌ಗೆ ನೀಡಿದ್ದ ಭದ್ರತೆ ವಾಪಸ್... ಬಿಎಸ್​ವೈ ವಿರುದ್ಧ ಗುಡುಗಿದ ಶಾಸಕ!

ಆದರೆ, ಐಜಿಪಿ ದೇವಜ್ಯೋತಿ ರೇಯವರು ಮಂಗಳೂರಿನಲ್ಲಿ‌ ಇರದ ಕಾರಣ, 4.45ರ ಸುಮಾರಿಗೆ ನಗರ ಪೊಲೀಸ್ ಆಯುಕ್ತ ಎನ್​. ಶಶಿಕುಮಾರ್ ಸ್ಥಳಕ್ಕಾಗಮಿಸಿ ಪ್ರತಿಭಟನಾ ನಿರತರ ಮನವಿಯನ್ನು ಐಜಿಪಿಯವರಿಗೆ ತಲುಪಿಸುವ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.