ETV Bharat / city

ಎಂಡಿಎಫ್​ ಕೃತ್ಯಕ್ಕೆ ಕಾಂಗ್ರೆಸ್, ಜೆಡಿಎಸ್ ಮತ್ತು ಸರ್ಕಾರದಿಂದ ನೇರವಾಗಿ ಬೆಂಬಲ: ಚಕ್ರವರ್ತಿ ಸೂಲಿಬೆಲೆ

ಆಜಾನ್ ಸದ್ದು ನಿಯಂತ್ರಣ ಮಾಡಬೇಕು ಎಂಬುದು ಸುಪ್ರೀಂಕೋರ್ಟ್ ಆದೇಶವಾಗಿದೆ. ಅದನ್ನು ಪಾಲಿಸುವುದು ಸರ್ಕಾರದ ಜವಾಬ್ದಾರಿ. ದುರಾದೃಷ್ಟವಶಾತ್ ಈ ಸರಕಾರ ಕೋರ್ಟ್ ಆದೇಶ ಪಾಲಿಸುತ್ತಿಲ್ಲ. ಕರ್ನಾಟಕದಲ್ಲಿ ಎಲ್ಲಾ ಪಕ್ಷಗಳೂ ಮುಸ್ಲಿಮರ ವೋಟು ಯಾರು ಜಾಸ್ತಿ ತೆಗೋತಾರೆ ಎಂಬ ಜಿದ್ದಾಜಿದ್ದಿಗೆ ಬಿದ್ದಿವೆ ಎಂದು ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ.

Chakravarti Sulibele statement
ಚಕ್ರವರ್ತಿ ಸೂಲಿಬೆಲೆ
author img

By

Published : May 9, 2022, 9:34 PM IST

ಮಂಗಳೂರು: ಎಂಡಿಎಫ್ ಮೂಲಕ ಮುಸ್ಲಿಂ ಮಹಿಳೆಯರಿಗೆ, ಮನೆಯಿಂದ ಆಚೆ ಬರೋವಾಗ ಬುರ್ಖಾ ಹಾಕಿರಬೇಕು. ಸೆಲ್ಫಿ ತೆಗೆದುಕೊಳ್ಳುವುದಕ್ಕೂ ಬುರ್ಖಾ ತೆಗೆದರೆ ಎಚ್ಚರಿಕೆ ನೀಡುತ್ತಾರೆ. ಇದು ಸಮಾಜದಲ್ಲಿ ಆತಂಕವನ್ನು ಸೃಷ್ಟಿ ಮಾಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದನ್ನು ಸರಿ ಮಾಡುವುದಕ್ಕೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಒತ್ತಾಯಿಸಿದ್ದಾರೆ.

ಎಂಡಿಎಫ್​ ಭಯೋತ್ಪಾದಕ ಕೃತ್ಯಕ್ಕೆ ಕಾಂಗ್ರೆಸ್, ಜೆಡಿಎಸ್ ಮತ್ತು ಸರ್ಕಾರ ನೇರವಾಗಿ ಬೆಂಬಲ

ಮುಸ್ಲಿಮರು ಬಹಿರಂಗ ಬೆದರಿಕೆ ಹಾಕುತ್ತಿದ್ದು, ಇದರಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಬಹಿರಂಗವಾಗಿ ಕಲ್ಲೆಸೆಯುತ್ತಾರೆ. ಹಾಡಹಗಲೇ ಹತ್ಯೆ ಮಾಡುತ್ತಾರೆ.‌ ಇದು ಸರಕಾರದ ದಿವಾಳಿತನವನ್ನು ತೋರ್ಪಡಿಸುತ್ತದೆ. ಶಿವಮೊಗ್ಗದಲ್ಲಿ ಹತ್ಯೆಯಾದಾಗ ಉತ್ತರಪ್ರದೇಶ ಮಾದರಿಯಲ್ಲಿ ಇಬ್ಬರನ್ನು ಎನ್​​​​​​​​​ಕೌಂಟರ್ ಮಾಡಿ ಬಿಸಾಡಬೇಕಿತ್ತು. ಬುಲ್ಡೋಜರ್ ತಂದು ಮನೆಗಳನ್ನು ಉರುಳಿಸಬೇಕಿತ್ತು.‌ ಆದರೆ ಎಲ್ಲರೂ ಮುಸ್ಲಿಮರ ಮತಕ್ಕಾಗಿ ಹಪಹಪಿಸಿ ಸಹಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಆಜಾನ್ ಸದ್ದು ನಿಯಂತ್ರಣ ಮಾಡಬೇಕು ಎಂಬುದು ಸುಪ್ರೀಂಕೋರ್ಟ್ ಆದೇಶವಾಗಿದೆ. ಅದನ್ನು ಪಾಲಿಸುವುದು ಸರ್ಕಾರದ ಜವಾಬ್ದಾರಿ. ದುರಾದೃಷ್ಟವಶಾತ್ ಈ ಸರಕಾರ ಕೋರ್ಟ್ ಆದೇಶ ಪಾಲಿಸುತ್ತಿಲ್ಲ. ಸರಕಾರ ಮತ್ತು ವಿರೋಧ ಪಕ್ಷಗಳು ಈ ವಿಚಾರದಲ್ಲಿ ಒಂದಾಗಿವೆ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಮುಸ್ಲಿಮರ ವೋಟು ಯಾರು ಜಾಸ್ತಿ ತೆಗೋತಾರೆ ಎಂಬ ಜಿದ್ದಾಜಿದ್ದಿಗೆ ಬಿದ್ದಂತಿದೆ ಎಂದು ದೂರಿದರು.

ಇದನ್ನೂ ಓದಿ: ಮಹಿಳೆಯಿಂದ ಬೈಕ್​​​ನಲ್ಲಿ ಏಕಾಂಗಿ 'ವಿಶ್ವ' ಪರ್ಯಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.