ಮಂಗಳೂರು: ಉಳ್ಳಾಲ ಕೋಟೆಕಾರ್ ಪಟ್ಟಣ ಪಂಚಾಯತ್ಗೆ ಸೋಮವಾರ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ವಧುವೊಬ್ಬರು ಮತದಾನ ಮಾಡುವ ಮೂಲಕ ಗಮನ ಸೆಳೆದರು. ಈ ಚುನಾವಣೆಯಲ್ಲಿ ಶೇಕಡಾ 66.16ರಷ್ಟು ಮತದಾನ ನಡೆದಿದೆ.
ಪುರುಷರಿಗಿಂತ ಮಹಿಳೆಯರು ಅತಿ ಹೆಚ್ಚು ಮತದಾನ ಮಾಡುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. 8ನೇ ವಾರ್ಡಿನ ಕೋಟೆಕಾರು ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಹಸೆಮಣೆ ಏರಿದ ವಧುವೊಬ್ಬರು ಮದುವೆ ಮುಗಿಸಿ ಬಂದು ಮತ ಚಲಾಯಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ನಗರದ ಅಡ್ಕದ ಭಗವತಿ ಸಭಾಂಗಣದಲ್ಲಿ ನಡೆದಿರುವ ಮದುವೆಯಲ್ಲಿ ನಾಗೇಶ್ ಎಂಬುವರ ಕೈಹಿಡಿದ ವಧು ಶ್ರದ್ಧಾ ಮದುವೆ ಮಂಟಪದಿಂದಲೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿ ಗಮನಸೆಳೆದರು.
ಉಚ್ಚಿಲ, ಅಜ್ಜಿನಡ್ಕ, ಪಾನೀರ್, ಕೋಟೆಕಾರ್ ಪಟ್ಟಣ ಪಂಚಾಯಿತಿ ಮತಗಟ್ಟೆಗಳಲ್ಲಿ ಹಿರಿಯ ನಾಗರಿಕರು ಅಧಿಕ ಮತ ಚಲಾಯಿಸಿದ್ದಾರೆ. ಹಿರಿಯ ನಾಗರಿಕರಿಗಾಗಿ ವಾಹನ ಹಾಗೂ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: ಸ್ಕೇಟಿಂಗ್ ನ್ಯಾಷನಲ್ ಚಾಂಪಿಯನ್‌ಶಿಪ್: ಕುಂದಾನಗರಿಗೆ 6 ಪದಕ