ETV Bharat / city

5ನೇ ಕ್ಲಾಸ್​ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಆರೋಪಿ ಬಂಧನಕ್ಕೆ ಜನರ ಒತ್ತಾಯ - kadaba attempted rape of a student news

ಕಡಬ ತಾಲೂಕಿನ ದೋಳ್ಪಾಡಿಯಲ್ಲಿ ಐದನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಗ್ರಾಮಸ್ಥರು ಪೊಲೀಸ್ ಉನ್ನತಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

attampte-to-rape-of-a-sudent-in-kadaba-dolpadi
ಕಡಬ ಐದನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ
author img

By

Published : Dec 16, 2019, 7:02 PM IST

ಕಡಬ(ದಕ್ಷಿಣ ಕನ್ನಡ): ಜಿಲ್ಲೆಯ ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಸರ್ಕಾರಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಸಿದ್ದ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ದೋಳ್ಪಾಡಿ ಗ್ರಾಮಸ್ಥರು ಪೊಲೀಸರಿಗೆ ಮನವಿ ಸಲ್ಲಿಸಿದರು.

attampte to rape of a sudent in kadaba dolpadi
ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಮನವಿ

ಡಿ.14 ರಂದು ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ, ಆರೋಪಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಷ್ಟರಲ್ಲಿ ಬಾಲಕಿ ಕೂಗಿಕೊಂಡಾಗ ಕೊಲೆಗೈಯಲು ಮುಂದಾಗಿದ್ದನಂತೆ. ದಾರಿಯಲ್ಲಿ ಯಾರೋ ಬರುತ್ತಿರುವುದನ್ನು ಗಮನಿಸಿ ವಿದ್ಯಾರ್ಥಿನಿಯನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿನಿ ಮೇಲೆ ಹಾಡಹಗಲೇ ನಡುರಸ್ತೆಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಎಷ್ಟೇ ಪ್ರಭಾವಿತನಾಗಿದ್ದರೂ ಕೂಡಾ ಅವನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ದೋಳ್ಪಾಡಿ ನಿವಾಸಿಗಳು ಮತ್ತು ಹಲವು ಸಂಘಟನೆಗಳ ಸದಸ್ಯರು ಪುತ್ತೂರು ಡಿವೈಎಸ್ಪಿ ದಿನಕರ್ ಶೆಟ್ಟಿಯವರಿಗೆ ಮನವಿ ಸಲ್ಲಿಸಿದ್ದಾರೆ.

Intro:ಕಡಬ

ಕಡಬ ತಾಲೂಕಿನ ದೋಳ್ಪಾಡಿಯಲ್ಲಿ ಐದನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ, ಆರೋಪಿಯನ್ನು ಬಂಧಿಸಿದ ಪೋಲೀಸರು. ಕಠಿಣ ಶಿಕ್ಷೆಗೆ ಒತ್ತಾಯಿಸಿ ಊರಿನವರಿಂದ ಪೋಲೀಸ್ ಉನ್ನತಾಧಿಕಾರಿಗಳಿಗೆ ಮನವಿ.Body:ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಸರಕಾರಿ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ನಡೆದಿದ್ದು, ಈ ಬಗ್ಗೆ ಒರ್ವನನ್ನು ಪೋಲೀಸರು ಬಂಧಿಸಿದ್ದಾರೆ.
ಡಿ.14 ರಂದು ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಹೋಗುತಿದ್ದ ವೇಳೆ ಆರೋಪಿಯು ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿದ್ದು ಕೂಗಿಕೊಂಡಾಗ ಕೊಲೆಗೈಯಲು ಯತ್ನಿಸಿದ ಎಂದು ತಿಳಿದುಬಂದಿದೆ.
ಶಾಲೆಯಿಂದ ಅದೇ ದಾರಿಯಲ್ಲಿ ಯಾರೋ ಬರುತ್ತಿರುವುದನ್ನು ಗಮನಿಸಿದ ಆರೋಪಿ ವಿದ್ಯಾರ್ಥಿನಿಯನ್ನು ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.Conclusion:ಇನ್ನು ಈ ಘಟನೆಯ ಬಗ್ಗೆ ಊರಿನವರಿಂದ ಪೋಲಿಸ್ ಉನ್ನತಾಧಿಕಾರಿಗಳಿಗೆ ಮನವಿ ನೀಡಿದ್ದು, ದೇಶದಲ್ಲೆಡೆ ದಿನ ನಿತ್ಯ ಕೇಳಿ ಬರುತ್ತಿರುವ ಅತ್ಯಾಚಾರ ಪ್ರಕರಣಗಳು ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ದೋಳ್ಪಾಡಿಯಂತಹ ಗ್ರಾಮೀಣ ಶಾಲೆಯ ವಿದ್ಯಾರ್ಥಿನಿಯನ್ನು ಹಾಡುಹಗಲೇ ನಡುರಸ್ತೆಯಲ್ಲಿ ಅತ್ಯಾಚಾರ ಯತ್ನಿಸಿದ ಆರೋಪಿ ಎಷ್ಟೇ ಪ್ರಭಾವಿತನಾದರು ಆತನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ದೋಳ್ಪಾಡಿಯ ಗ್ರಾಮಸ್ಥರು ಹಾಗೂ ಹಲವು ಸಂಘಟನೆಗಳ ಪ್ರಮುಖರು ಪುತ್ತೂರು ಡಿವೈಎಸ್ಪಿ ದಿನಕರ್ ಶೆಟ್ಟಿ, ಮತ್ತು ಕಡಬ ಠಾಣೆಗೆ ಮನವಿ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.