ಮಂಗಳೂರು: ಖ್ಯಾತ ಅಥ್ಲೀಟ್ ಪೂವಮ್ಮ ಅವರು ಇಂದು ಮಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಏಷ್ಯನ್ ಗೇಮ್ಸ್ನಲ್ಲಿ ಸ್ವರ್ಣ ಪದಕ ವಿಜೇತೆಯಾಗಿರುವ ಪೂವಮ್ಮ ಇಂದು ಕೇರಳದ ಅಥ್ಲೀಟ್ ಜಿತಿನ್ ಪೌಲ್ ಜೊತೆ ನವ ಜೀವನಕ್ಕೆ ಕಾಲಿಟ್ಟರು.
ಮಂಗಳೂರು ನಗರದ ಹೊರವಲಯದಲ್ಲಿರುವ ಅಡ್ಯಾರ್ ಗಾರ್ಡನ್ನ ವಿ.ಕೆ ಶೆಟ್ಟಿ ಅಡಿಟೋರಿಯಂನಲ್ಲಿ ಈ ವಿವಾಹ ಸಮಾರಂಭ ನಡೆಯಿತು. ಕೊಡವ ಸಂಪ್ರದಾಯದಂತೆ ಈ ಮದುವೆ ನಡೆದಿದ್ದು, ವಧುವರರ ತಂದೆ - ತಾಯಿ, ಕುಟುಂಬವರ್ಗ ಮತ್ತು ಬಂಧುಮಿತ್ರರು ಪಾಲ್ಗೊಂಡಿದ್ದರು. ಜ. 1ರಂದು ಕೇರಳದ ತ್ರಿಶೂರಿನಲ್ಲಿ ವಿವಾಹ ಪ್ರಯುಕ್ತ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: ಪವರ್ ಸ್ಟಾರ್ ನಮ್ಮನ್ನಗಲಿ ಇಂದಿಗೆ 2 ತಿಂಗಳು.. ಕುಟುಂಬಸ್ಥರಿಂದ ಸಮಾಧಿಗೆ ಪೂಜೆ