ETV Bharat / city

ಮಂಗಳೂರು: ವರದಿಗಾರನ ಮೇಲೆ ಹಲ್ಲೆ ಪ್ರಕರಣದಲ್ಲಿ ವಕೀಲನ ಬಂಧನ

ವರದಿಗಾರರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ವಕೀಲ ಯದುನಂದನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

advocate arrested under Assault on a reporter case
ವಕೀಲ ಯದುನಂದನ್​​ ಬಂಧನ
author img

By

Published : Nov 23, 2021, 5:45 PM IST

ಮಂಗಳೂರು: ಖಾಸಗಿ ಚಾನೆಲ್ ಒಂದರ ವರದಿಗಾರರೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ವಕೀಲ ಯದುನಂದನ್ ಎಂದು ಗುರುತಿಸಲಾಗಿದೆ.

ವರದಿಗಾರನ ಮೇಲೆ ಹಲ್ಲೆ-ಪೊಲೀಸ್​ ಕಮಿಷನರ್​ ಶಶಿಕುಮಾರ್ ಪ್ರತಿಕ್ರಿಯೆ

ಈ ಬಗ್ಗೆ ಮಂಗಳೂರು ಪೊಲೀಸ್​ ಕಮಿಷನರ್​ ಶಶಿಕುಮಾರ್ ​ಮಾಹಿತಿ ನೀಡಿದರು. ಹೊಯಿಗೆ ಬಝಾರ್​ನ ಸ್ಟಾರ್ಸ್ ಸ್ಕೇಟಿಂಗ್ ಎಂಬಲ್ಲಿ ನಡೆದ ಸಣ್ಣ ವಾಗ್ವಾದವೊಂದು ವಿಕೋಪಕ್ಕೆ ತಿರುಗಿ ಈ ಹಲ್ಲೆ ನಡೆದಿದೆ. ಇಬ್ಬರು ಮಕ್ಕಳ ನಡುವಿನ ರಾಜ್ಯ ಮಟ್ಟದ ಸ್ಕೇಟಿಂಗ್ ಪಂದ್ಯಾಟದ ವಿಚಾರವಾಗಿ ಪೋಷಕರ ನಡುವೆ ಈ ವಾಗ್ವಾದ ನಡೆದಿತ್ತು. ಆ ವೇಳೆ ವಕೀಲ ಯದುನಂದನ್ ಎಂಬಾತ ವರದಿಗಾರರಿಗೆ ರಾಡ್​ನಿಂದ ತಲೆಗೆ ಒಡೆದು ಹಲ್ಲೆ ನಡೆಸಿದ್ದಾರೆ. ಪರಿಣಾಮ, ವರದಿಗಾರನ ತಲೆಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಯದುನಂದನ್ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ವಿವಾಹೇತರ ಸಂಬಂಧ: ಚಿಕ್ಕಬಳ್ಳಾಪುರದಲ್ಲಿ ಮಹಿಳೆ ಕೊಲೆ ಆರೋಪ, ಪೊಲೀಸ್​ ಕಾನ್ಸ್​ಟೇಬಲ್​ ಎಸ್ಕೇಪ್​

ಇದೀಗ ಯದುನಂದನ್ ಕಡೆಯವರು ಕೂಡ ಪ್ರತಿದೂರು ದಾಖಲಿಸಿದ್ದಾರೆ. ಅವರೇ ಮೊದಲು ಗಲಾಟೆ ನಡೆಸಿದ್ದು, ಪ್ರಾಣ ರಕ್ಷಣೆಗಾಗಿ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು-ಪ್ರತಿದೂರು ದಾಖಲಾಗಿದೆ ಎಂದು ಶಶಿಕುಮಾರ್​ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.