ETV Bharat / city

ಕೊರಗಜ್ಜನ ಕಟ್ಟೆಗೆ ಭೇಟಿ ನೀಡಿ ಹರಕೆ ತೀರಿಸಿದ ನಟಿ ರಕ್ಷಿತಾ ಪ್ರೇಮ್ - ಕೊರಗಜ್ಜನ ಕಟ್ಟೆಗೆ ರಕ್ಷಿತಾ ಪ್ರೇಮ್

ನಟಿ ರಕ್ಷಿತಾ ಪ್ರೇಮ್ ಅವರು ಇಲ್ಲಿನ ಕೊರಗಕ್ಕ ಕಟ್ಟೆಗೆ ಭೇಟಿ ನೀಡಿ, ಹರಕೆ ತೀರಿಸಿದರು.

ನಟಿ ರಕ್ಷಿತಾ ಪ್ರೇಮ್
ನಟಿ ರಕ್ಷಿತಾ ಪ್ರೇಮ್
author img

By

Published : Oct 7, 2021, 3:54 AM IST

ಉಳ್ಳಾಲ: ಕುತ್ತಾರು ಕೊರಗಜ್ಜ ಕಟ್ಟೆಗೆ ನಟಿ ರಕ್ಷಿತಾ ಪ್ರೇಮ್ ಮಂಗಳವಾರ ಭೇಟಿ ನೀಡಿದರು. ಕಾರ್ಯಕ್ರಮವೊಂದರ ಯಶಸ್ಸಿಗಾಗಿ ಕೊರಗಜ್ಜನ ಬಳಿ ಹರಕೆ ಹೊತ್ತ ಹಿನ್ನೆಲೆಯಲ್ಲಿ ಭೇಟಿ ನೀಡಿ ಹರಕೆ ಸಲ್ಲಿಸಿದರು.

ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟಿ ರಕ್ಷಿತಾ ಪ್ರೇಮ್ ಸದ್ಯ ಖಾಸಗಿ ವಾಹಿನಿವೊಂದರ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರ ಯಶಸ್ಸಿಗಾಗಿ ಇವರು ಹರಕೆ ಹೊತ್ತಿದ್ದರು. ಈ ಬಗ್ಗೆ ಮಂಗಳೂರಿನಲ್ಲಿರುವ ಕಲಾವಿದರಲ್ಲಿ ಹರಕೆ ಹೊತ್ತ ಕುರಿತು ತಿಳಿಸಿದ್ದು, ಅದರಂತೆ ಬುಧವಾರ ಎಲ್ಲರೂ ನಟಿ ರಕ್ಷಿತಾ ಜತೆಗೆ ಕೊರಗಜ್ಜ ಕಟ್ಟೆಗೆ ಭೇಟಿ ನೀಡಿದರು.

ಈ ವೇಳೆ ನಾಟಕ ಕಲಾವಿದ ಕಿಶೋರ್ ಡಿ.ಕೆ, ಕಾಮಿಡಿ ಕಿಲಾಡಿಯ ಕಲಾವಿದರಾದ ಧೀರಜ್ ನೀರುಮಾರ್ಗ, ಸೂರಜ್ ಪಾಂಡೇಶ್ವರ, ಬೆಂಗಳೂರಿನ ಖ್ಯಾತ ಕೊರಿಯೋಗ್ರಾಫರ್ ರಾಹುಲ್ ಮತ್ತು ಪ್ರಜ್ವಲ್ ಮೊದಲಾದವರು ಜೊತೆಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.