ETV Bharat / city

ಬೇನಾಮಿ ಆಸ್ತಿ ಗುಮಾನಿ: ಹನೂರು, ಮಂಗಳೂರಿನಲ್ಲಿ ACB ಶೋಧ - ಚಾಮರಾಜನಗರ

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಎಕ್ಸಿಕ್ಯೂಟಿವ್ ಇಂಜಿನಿಯರ್(ಎಇ) ಕೆ.ಎಸ್.ಲಿಂಗೇಗೌಡ ಅವರ ಬೇನಾಮಿ ಆಸ್ತಿ ಗುಮಾನಿ ಹಿನ್ನೆಲೆಯಲ್ಲಿ ಸ್ವಗ್ರಾಮ ಹನೂರು ತಾಲೂಕಿನ ಕಣ್ಣೂರು ಹಾಗೂ ಮಂಗಳೂರು ಸೇರಿದಂತೆ ಸಂಬಂಧಿಗಳ ಮನೆಯನ್ನು ಎಸಿಬಿ ಅಧಿಕಾರಿಗಳ ತಂಡ ಜಾಲಾಡುತ್ತಿದೆ.

ACB
ಎಸಿಬಿ
author img

By

Published : Nov 24, 2021, 10:02 AM IST

ಚಾಮರಾಜನಗರ: ಎಸಿಬಿ ಬಲೆಗೆ ಬಿದ್ದಿರುವ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಎಕ್ಸಿಕ್ಯೂಟಿವ್ ಇಂಜಿನಿಯರ್(ಎಇ) ಕೆ.ಎಸ್.ಲಿಂಗೇಗೌಡ ಅವರ ಬೇನಾಮಿ ಆಸ್ತಿ ಮಾಡಿರುವ ಗುಮಾನಿ ಹಿನ್ನೆಲೆಯಲ್ಲಿ ಸ್ವಗ್ರಾಮ ಹನೂರು ತಾಲೂಕಿನ ಕಣ್ಣೂರು ಸೇರಿದಂತೆ ಸಂಬಂಧಿಗಳ ಮನೆಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ತಂಡ ಜಾಲಾಡುತ್ತಿದೆ.

ಗೌರಿ ಶಂಕರ ಕಲ್ಯಾಣ ಮಂಟಪ, ಹತ್ತಾರು ಎಕರೆ ಕೃಷಿ ಭೂಮಿ, ಮನೆಗಳು, ವಾಹನಗಳ ದಾಖಲೆ - ಆದಾಯದ ಮೂಲವನ್ನು ಎಸಿಬಿ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಮುಖ್ಯ ಕಡತಗಳನ್ನು ವಶಪಡಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ‌.

6 ಮಂದಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಬೆಳ್ಳಂಬೆಳಗ್ಗೆ ಲಿಂಗೇಗೌಡ ಸಂಬಂಧಿಕರು ಶಾಕ್​​​ಗೆ ಒಳಗಾಗಿದ್ದಾರೆ. ಲಿಂಗೇಗೌಡ ಅವರ ಮತ್ತೊಬ್ಬ ಸಹೋದರ ಬೆಂಗಳೂರಿನಲ್ಲಿ ಉನ್ನತ ಅಧಿಕಾರಿಯಾಗಿದ್ದಾರೆ.

ಮಂಗಳೂರಿನಲ್ಲಿಯೂ ದಾಳಿ:

ರಾಜ್ಯಾದ್ಯಂತ ವಿವಿಧ ಅಧಿಕಾರಿಗಳ ಮನೆ ಮೇಲೆ ಏಕಕಾಲದಲ್ಲಿ ಎಸಿಬಿ ದಾಳಿ ನಡೆಸಿದೆ. ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗೇಗೌಡ ಅವರ ಮನೆಗೆ ಮುಂಜಾನೆಯೇ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಎಸಿಬಿ ಬಿಗ್ ಶಾಕ್: ರಾಜ್ಯದೆಲ್ಲೆಡೆ ಏಕಕಾಲಕ್ಕೆ 60 ಕಡೆ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.