ಮಂಗಳೂರು: ನಗರದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ನಡುವೆಯೂ ಪೊಲೀಸ್ ಇಲಾಖೆಯ ಅಬ್ಬಕ್ಕ ಪಡೆ ಎಂದಿನಂತೆ ಕಾರ್ಯನಿರ್ವಹಿಸಿದ್ದು, ಇದನ್ನು ಕಂಡ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಸಿಬ್ಬಂದಿಗಳಿಗೆ ಶ್ಲಾಘನೆ ನೀಡಿದ್ದಾರೆ.
ಮಹಿಳೆಯರ ರಕ್ಷಣೆಗಾಗಿ ಆರಂಭಿಸಲಾದ ಅಬ್ಬಕ್ಕ ಪಡೆ, ಭಾರಿ ಮಳೆಯ ನಡುವೆಯೂ ಬಸ್ ನಿಲ್ದಾಣ, ವಿದ್ಯಾರ್ಥಿನಿಯರ ನಡುವೆ ಇದ್ದು ಕಾರ್ಯ ನಡೆಸುತ್ತಿದೆ. ಮಹಿಳೆಯರ ರಕ್ಷಣೆ ವಿಚಾರವಾಗಿಯೇ ಅಬ್ಬಕ್ಕ ಪಡೆ ಅಸ್ತಿತ್ವಕ್ಕೆ ಬಂದಿದ್ದು, ಇದೀಗ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ.