ಮಂಗಳೂರು: ನಗರದ ಹೊರವಲಯದ ಕಿನ್ನಿಗೋಳಿ ಯುವಕನೊಬ್ಬ ಕುವೈತ್ನ ಸಾಲ್ಮಿಯಾ ಬೀಚ್ನಲ್ಲಿ ಸಮುದ್ರ ಪಾಲಾದ ಘಟನೆ ನಿನ್ನೆ ಸಂಜೆ (ಭಾರತೀಯ ಕಾಲಮಾನ ರಾತ್ರಿ 8.30 ) ನಡೆದಿದೆ.
ಕಿನ್ನಿಗೋಳಿ ಮೂಲದ ಮೊಹಮ್ಮದ್ ಅನೀಸ್ (28) ಮೃತ ಯುವಕ. ಅನೀಸ್ ತನ್ನ ಸ್ನೇಹಿತರೊಂದಿಗೆ ಸಾಲ್ಮಿಯಾ ಬೀಚ್ಗೆ ಸಮುದ್ರ ವಿಹಾರಕ್ಕೆ ತೆರಳಿದ್ದರು. ಈ ಸಂದರ್ಭ ಸಮುದ್ರ ಪಾಲಾಗುತ್ತಿದ್ದ ಈಜಿಪ್ಟ್ ಪ್ರಜೆಯನ್ನು ರಕ್ಷಿಸಲು ಹೋಗಿ ಅನೀಸ್ ತಾನೇ ಸಮುದ್ರ ಪಾಲಾಗಿದ್ದಾನೆ.
ಕುವೈತ್ ನೇವಿ ಹಾಗೂ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ನಡೆಸಿ ಇಂದು ಬೆಳಗ್ಗೆ ಮೃತದೇಹ ಪತ್ತೆಹಚ್ಚಿದ್ದಾರೆ. ಕುವೈತ್ನಲ್ಲಿಯೇ ಅವರ ಮೃತದೇಹದ ದಫನ ಕಾರ್ಯ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.