ETV Bharat / city

ಕೋವಿಡ್‌ನಿಂದ ಮೃತಪಟ್ಟ ಮುಸ್ಲಿಂ ಮಹಿಳೆಯರ 'ಮಯ್ಯತ್‌ ಸ್ನಾನ' ನೆರವೇರಿಸಲು ವಿಶೇಷ ತಂಡ - ಮಂಗಳೂರು ಲೇಟೆಸ್ಟ್​ ನ್ಯೂಸ್

ಕೋವಿಡ್​ನಿಂದ ಮೃತಪಟ್ಟ ಮುಸ್ಲಿಂ ಮಹಿಳೆಯರ ಮಯ್ಯತ್ ಸ್ನಾನ (ಅಂತಿಮ ವಿಧಿ) ನೆರವೇರಿಸಲು ನ್ಯಾಷನಲ್ ವುಮನ್ ಫ್ರಂಟ್​ನ ಮುಸ್ಲಿಂ ಮಹಿಳೆಯರ ತಂಡವೊಂದು ಸಜ್ಜಾಗಿದೆ.

Mangalore
ಕೋವಿಡ್​ನಿಂದ ಮೃತಪಟ್ಟವರ ಅಂತಿಮ ವಿಧಿ ನೆರವೇರಿಸಲು ಸಜ್ಜಾದ ಮಹಿಳಾ ತಂಡ
author img

By

Published : Apr 26, 2021, 10:46 AM IST

ಮಂಗಳೂರು: ಕೋವಿಡ್​ನಿಂದ ಮೃತಪಟ್ಟ ಮುಸ್ಲಿಂ ಮಹಿಳೆಯರ ಮಯ್ಯತ್ ಸ್ನಾನ ನೆರವೇರಿಸಲು ನ್ಯಾಷನಲ್ ವುಮನ್ ಫ್ರಂಟ್​ನ ಮುಸ್ಲಿಂ ಮಹಿಳೆಯರ ತಂಡವೊಂದು ಸಜ್ಜಾಗಿದೆ.

ಈ ತಂಡದಲ್ಲಿನ ಮಹಿಳೆಯರು ಪಿಪಿಇ ಕಿಟ್, ಮಾಸ್ಕ್, ಫೇಸ್ ಶೀಲ್ಡ್ ಕವರ್, ಗ್ಲೌಸ್​ಗಳನ್ನು ಧರಿಸಿ ಮುಸ್ಲಿಂ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸುತ್ತಾರೆ.

ಈಗಾಗಲೇ ಈ ತಂಡ ಕೋವಿಡ್​​ನಿಂದ ಮೃತಪಟ್ಟ 7ಕ್ಕೂ ಅಧಿಕ ಮಹಿಳೆಯರ ಅಂತಿಮ ವಿಧಿ‌ ನೆರವೇರಿಸಿ ಮೃತದೇಹಕ್ಕೆ ಫನ್ ಬಟ್ಟೆ ಧರಿಸಿ, ಅದನ್ನು ಪ್ಲಾಸ್ಟಿಕ್​ನಿಂದ ಮುಚ್ಚಿ ಕುಟುಂಬಕ್ಕೆ ಹಸ್ತಾಂತರ ಮಾಡಿದೆ. ಒಂದು ವೇಳೆ ಮೃತರ ವಾರಸುದಾರರು ಇಲ್ಲದಿದ್ದಲ್ಲಿ ದಫನ ಕಾರ್ಯವನ್ನೂ ಕೂಡ ಇವರೇ ನೆರವೇರಿಸುತ್ತಾರೆ. ರಾಜ್ಯದಲ್ಲಿ ಈ ರೀತಿ 19 ತಂಡಗಳು ಕಾರ್ಯ ನಿರ್ವಹಿಸುತ್ತಿವೆ.

ಇದನ್ನೂ ಓದಿ: ಇಂದು ಸಚಿವ ಸಂಪುಟ ಸಭೆ: ಲಾಕ್​ಡೌನ್ ಗೊಂದಲಕ್ಕೆ ತೆರೆ, ಉಚಿತ ಲಸಿಕೆ ಬಗ್ಗೆ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.