ಉಳ್ಳಾಲ (ಮಂಗಳೂರು): ಉಳಿಯದ ಸಮೀಪ ನೇತ್ರಾವತಿ ನದಿಯಲ್ಲಿ ಮಂಗಳವಾರ ಸಂಜೆ ಯುವಕನೊಬ್ಬನ ಶವ ತೇಲಿ ಬಂದಿದ್ದು, ಸ್ಥಳಕ್ಕೆ ಉಲ್ಲಾಳ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮೃತ ದೇಹದಲ್ಲಿ ಚುನಾವಣಾ ಗುರುತಿನ ಚೀಟಿ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಮಂಗಳೂರು ತಾಲೂಕಿನ ಸೋಮೇಶ್ವರದ ಸಾರಸ್ವತ ಕಾಲೋನಿ ನಿವಾಸಿ ಸಂಜೀವ ಆಚಾರ್ಯ ಎಂಬುವವರ ಪುತ್ರ ಚೇತನ್ (33) ಎಂದು ಗುರ್ತಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.