ಕಲಬುರಗಿ: ಬಕ್ರೀದ್ ಹಬ್ಬದ ಹಿನ್ನೆಲೆ ಗೋಹತ್ಯೆ ಮಾಡಿ ತ್ಯಾಜ್ಯ ಸಾಗಿಸುತ್ತಿದ್ದ ಟಂಟಂ ವಾಹನ ತಡೆದು ಜನರು ಆಕ್ರೋಶ ವ್ಯಕ್ತ ಪಡಿಸಿದ ಘಟನೆ ತಾಜ ಸುಲ್ತಾನಪುರ ಕ್ರಾಸ್ ಬಳಿ ನಡೆದಿದೆ.
ಗೋಹತ್ಯೆ ವಿರೋಧದ ನಡುವೆಯೂ ಹಬ್ಬಕ್ಕಾಗಿ ನೂರಾರು ಗೋವುಗಳ ಬಲಿ ನೀಡಿದ್ದಾರೆ. ಮಾಂಸ, ಮುಖಭಾಗ, ಕೊಂಬು, ದೇಹದ ತ್ಯಾಜ್ಯವನ್ನು ತೆರೆದ ಟಂಟಂ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಆಳಂದ ಚೆಕ್ ಪೋಸ್ಟ್ ಕಡೆಯಿಂದ ಬರುವಾಗ ಯುವಕರ ತಂಡವೊಂದು ವಾಹನ ಅಡ್ಡಗಟ್ಟಲು ಯತ್ನಿಸಿದ್ದಾರೆ. ಚಾಲಕ ಅವರಿಂದ ತಪ್ಪಿಸಿಕೊಂಡು ವೇಗವಾಗಿ ತಾಜ್ ಸುಲ್ತಾನಪೂರ ಕಡೆಗೆ ಬಂದಿದ್ದಾನೆ. ಬೆನ್ನು ಬಿಡದ ಯುವಕರಿಗೆ ತಾಜಸುಲ್ತಾನಪೂರ ಕ್ರಾಸ್ ಬಳಿ ಸಿಕ್ಕಿಬಿದ್ದ.
ಸಿಕ್ಕಿಬಿದ್ದ ಚಾಲಕನಿಗೆ ಗೋವು ವಧೆ ಮಾಡಿರುವುದಲ್ಲದೆ ತೆರೆದ ವಾಹನದಲ್ಲಿ ಸಾಗಿಸುವ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದೀಯಾ ಎಂದು ಧರ್ಮದೇಟು ನೀಡಿದರು. ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಚೌಕ್ ಠಾಣಾ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಾತಾವರಣ ತಿಳಿಗೊಳಿಸಿದ್ದಾರೆ. ಈ ಕುರಿತು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.