ETV Bharat / city

ಕಲಬುರಗಿ ಎಸ್​​ಪಿ ಈಶಾ ಪಂತ್ ಮನೆಯಲ್ಲಿ 2 ಹಾವು ಪತ್ತೆ, ರಕ್ಷಣೆ - ಕಲಬುರಗಿ ಎಸ್​​ಪಿ ಈಶಾ ಪಂತ್

ಮನೆಯಲ್ಲಿ ಕೆಲಸ ಮಾಡುವಾಗ ಹಾವುಗಳನ್ನು ನೋಡಿದ ಎಸ್​ಪಿ ಈಶಾ ಪಂತ್, ಸ್ನೇಕ್ ಮಾಸ್ಟರ್ ಪ್ರಶಾಂತ್​​ ಅವರನ್ನು ಕರೆಸಿ ರಕ್ಷಣೆ ಮಾಡಿಸಿದರು.

Snake Found In Kalburagi SP Isha Pant Home
ಕಲಬುರಗಿ ಎಸ್​​ಪಿ ಈಶಾ ಪಂತ್ ಮನೆಯಲ್ಲಿ 2 ಹಾವು ಪತ್ತೆ
author img

By

Published : May 8, 2022, 10:50 AM IST

ಕಲಬುರಗಿ: ಬೆಳಗ್ಗೆ ಎಸ್​ಪಿ ಇಶಾ ಪಂತ್ ಮನೆಯಲ್ಲಿ ಎರಡು ಹಾವುಗಳು ಕಾಣಿಸಿಕೊಂಡಿವೆ. ಪೊಲೀಸ್ ಭವನ‌ ಮುಂಭಾಗದಲ್ಲಿರುವ ಮನೆಯ ಸ್ವಿಮ್ಮಿಂಗ್ ಫೂಲ್ ಬಳಿಯ ಕೊಣೆಯಲ್ಲಿ ಹಾವುಗಳಿದ್ದವು. ತಕ್ಷಣ ಎಸ್ಪಿ, ತಮ್ಮ ಸಹಾಯಕ ಸಿಬ್ಬಂದಿ ಮುಖಾಂತರ ಸ್ನೇಕ್ ಮಾಸ್ಟರ್ ಪ್ರಶಾಂತ್​ ಅವರನ್ನು ಕರೆಸಿ ರಕ್ಷಣೆ ಮಾಡಿಸಿದ್ದಾರೆ.

Snake Found In Kalburagi SP Isha Pant Home

ಸುಮಾರು 7 ಅಡಿ ಉದ್ಧದ ಇಂಡಿಯನ್ ರ‍್ಯಾಟ್​​ ಸ್ನೇಕ್(ಕೆರೆ ಹಾವು)​ ಇವಾಗಿದ್ದು, ಒಂದು ಹೆಣ್ಣು ಮತ್ತೊಂದು ಗಂಡು ಎಂದು ಪ್ರಶಾಂತ್​​ ಮಾಹಿತಿ ನೀಡಿದರು. ರಕ್ಷಿಸಿದ ಉರಗಗಳನ್ನು ಇಶಾ ಪಂತ್‌ ಮುಟ್ಟಿ ಖುಷಿಪಟ್ಟರು. ಸಹಾಯಕ‌ ಪೊಲೀಸ್ ಸಿಬ್ಬಂದಿ ಸೆಲ್ಪಿ ತೆಗೆದುಕೊಂಡರು. ಉರಗಗಳನ್ನು ನಿರ್ಜನ‌ ಪ್ರದೇಶದಲ್ಲಿ ಬಿಟ್ಟು ಬರಲಾಗಿದೆ. ಹಾವುಗಳು ಕಂಡರೆ ಹಾನಿ‌ ಮಾಡುವುದು, ಕೊಲ್ಲದೆ ನನಗೆ ಕರೆ ಮಾಡಿ ಎಂದು ಪ್ರಶಾಂತ್ ಮನವಿ ಮಾಡಿದರು. ಪ್ರಶಾಂತ್​ ಅವರ ಮೊಬೈಲ್ ನಂಬರ್: 7411431430/7411431414

ಇದನ್ನೂ ಓದಿ: ಕ್ರಿಕೆಟ್ ನೆಟ್‌ಗೆ ಸಿಲುಕಿ ಒದ್ದಾಡುತ್ತಿದ್ದ ಹಾವು ರಕ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.