ETV Bharat / city

ಎರಡು ಬೈಕ್‌ಗಳ ನಡುವೆ ಭೀಕರ ರಸ್ತೆ ಅಪಘಾತ: ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೂರು ದೇಹಗಳು! - ಕಲಬುರಗಿಯಲ್ಲಿ ಎರಡು ಬೈಕ್​ಗಳ ಮಧ್ಯೆ ಡಿಕ್ಕಿ

ಕಲಬುರಗಿ ಜಿಲ್ಲೆಯಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಬೈಕ್​ಗಳ ಮಧ್ಯೆ ಡಿಕ್ಕಿ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ಮುನ್ನೆಲೆಗೆ ಬಂದಿದೆ.

member killed in road accident at Kalaburagi  Two bikes collide in Kalaburagi  Kalaburagi road accident news  ಕಲಬುರಗಿಯಲ್ಲಿ ರಸ್ತೆ ಅಪಘಾತದಲ್ಲಿ ಜನ ಸಾವು  ಕಲಬುರಗಿಯಲ್ಲಿ ಎರಡು ಬೈಕ್​ಗಳ ಮಧ್ಯೆ ಡಿಕ್ಕಿ  ಕಲಬುರಗಿ ರಸ್ತೆ ಅಪಘಾತ ಸುದ್ದಿ
ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ
author img

By

Published : Jul 16, 2022, 12:23 PM IST

ಕಲಬುರಗಿ: ಎರಡು ಬೈಕ್​ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ಚಿಂಚೋಳಿ ತಾಲೂಕಿನ ಹೂವಿನಹಳ್ಳಿ ಬಳಿ ನಡೆದಿದೆ. ಮೃತರು ಶಿರೋಳ್ಳಿ ಗ್ರಾಮದ ಜಗನ್ನಾಥ್ ಚಕ್ಕುಲಿ (35), ಮೇಹಬೂಬ್ ಅಲಿ (45) ಹಾಗೂ ಶಾದಿಪೂರ ಗ್ರಾಮದ ಶ್ರೀಕಾಂತ್ (30) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಅಮರ ಎಂಬುವವರನ್ನು ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಓದಿ: ಸ್ಕೂಟರ್ ಕದ್ದು ಪರಾರಿಯಾಗುವಾಗ ಅಪಘಾತ: ಸಾರ್ವಜನಿಕರಿಂದ ಕಳ್ಳನಿಗೆ ಧರ್ಮದೇಟು

ಒಂದು ಬೈಕ್ ಚಿಂಚೋಳಿ ಕಡೆಗೆ ಹಾಗೂ ಇನ್ನೊಂದು ಬೈಕ್ ಸುಲೇಪೇಟ್ ಕಡೆಗೆ ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಅತಿ ವೇಗದಿಂದ ಓಡಿಸುತ್ತಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ‌ ನಡೆಸಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.