ETV Bharat / city

ಸಿದ್ದಲಿಂಗ ಸ್ವಾಮೀಜಿ ಘನತೆಗೆ ಧಕ್ಕೆ ಆರೋಪ: ಜೇವರ್ಗಿ ಠಾಣೆಗೆ ದೂರು - ಡಾ.ಅಶೋಕ್ ದೊಡ್ಮನಿ ಫೇಸ್​ಬುಕ್​ ಪೋಸ್ಟ್​

ಡಾ.ಅಶೋಕ್​ ದೊಡ್ಮನಿ ಎನ್ನುವವರು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪೋಸ್ಟ್​ಗಳನ್ನು ಹಾಕಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿದ್ದಲಿಂಗಯ್ಯ ಸ್ವಾಮೀಜಿ ಎಸ್​ಪಿ ಇಶಾ ಪಂತ್​ ಅವರಿಗೆ ಮನವಿ ಮಾಡಿದ್ದಾರೆ.

Sridalinga Swamiji, President of Srirama Sena
ಶ್ರೀರಾಮ‌ ಸೇನೆ ರಾಜ್ಯಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ
author img

By

Published : May 1, 2022, 1:16 PM IST

ಕಲಬುರಗಿ: ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೇವರ್ಗಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಸ್ಟ್ ಹಾಕಿರುವ ಡಾ.ಅಶೋಕ್ ದೊಡ್ಮನಿ ವಿರುದ್ದ ಸ್ವಾಮೀಜಿ ಗರಂ ಆಗಿದ್ದಾರೆ. ಡಾ.ಅಶೋಕ್ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಲಬುರಗಿ ಎಸ್​ಪಿ ಇಶಾ ಪಂತ್​ ಅವರಿಗೆ ಮನವಿ ಮಾಡಿದ್ದಾರೆ.

ಕಾನೂನು ಕ್ರಮ ಕೈಗೊಳ್ಳುವಂತೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲು ಮಾಡಿದ್ದಾರೆ. ಪಿಎಸ್ಐ ಅಕ್ರಮದಲ್ಲಿ ಸಿಐಡಿಯಿಂದ ಬಂಧನಕ್ಕೊಳಗಾಗಿರುವ ದಿವ್ಯಾ ಹಾಗರಗಿ ಮತ್ತು ಸುರೇಶ್ ಕಾಟೆಗಾಂವ್ ಜೊತೆಗೆ ನನ್ನ ಹೆಸರು ತಳುಕು ಹಾಕುವ ಪ್ರಯತ್ನ ಜೇವರ್ಗಿ ಪಟ್ಟಣದ ನಿವಾಸಿ ಡಾ.ಅಶೋಕ್ ದೊಡ್ಮನಿ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಪಿಎಸ್​ಐ ಮರುಪರೀಕ್ಷೆಗೆ ಆದೇಶ.. ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ: ಡಿಕೆಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.