ಕಲಬುರಗಿ: ಪಾದಚಾರಿಯ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೇಡಂ ಪಟ್ಟಣದ ಹಳೆಯ ಕೆಇಬಿ ಕಚೇರಿ ಬಳಿ ಜರುಗಿದೆ.
ಸೇಡಂ ತಾಲೂಕಿನ ಕೊಂಕನಹಳ್ಳಿ ಗ್ರಾಮದ ನಂಗಣ್ಣ (55) ಮೃತ ವ್ಯಕ್ತಿ. ತೀವ್ರ ರಕ್ತಸ್ರಾವದಿಂದ ಬಳಲಿ ಸ್ಥಳದಲ್ಲೇ ಸಾವನ್ನಪಿದ್ದಾನೆ.
ಈ ಸಂಬಂಧ ಸ್ಥಳಕ್ಕೆ ಸಿಪಿಐ ಮಹ್ಮದ್ ಫಸಿಯೋದ್ದಿನ್, ಪಿಎಸ್ಐ ಸುನೀಲ ಮೂಲಿಮನಿ ಭೇಟಿ ನೀಡಿ ಪರೀಶಿಲನೆ ನಡೆಸಿದ್ದು, ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.