ETV Bharat / city

ಪೊಲೀಸ್​ ಸಿಬ್ಬಂದಿ ವಿರುದ್ಧ ರಿಪಬ್ಲಿಕನ್ ಯೂಥ್ ಫೆಡರೇಷನ್ ಕಾರ್ಯಕರ್ತರ ಪ್ರತಿಭಟನೆ

ಮೇಲ್ಜಾತಿಯ ಯುವತಿಯನ್ನು ದಲಿತ ಯುವಕ ಮದುವೆಯಾಗಿದ್ದಾನೆಂದು ಯುವಕನ ಪೋಷಕರ ಮೇಲೆ ದ್ವೇಷ ಸಾಧಿಸಲಾಗಿದೆ. ಯುವಕನ ಪೋಷಕರನ್ನು ಕರೆತಂದು ಠಾಣೆಯಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಲಾಗಿದೆ. ವಿಚಾರಣೆ ನೆಪದಲ್ಲಿ ಪೊಲೀಸರು ಅಮಾನುಷವಾಗಿ ವರ್ತಿಸಿದ್ದಾರೆ..

author img

By

Published : Nov 29, 2020, 2:55 PM IST

ರಿಪಬ್ಲಿಕನ್ ಯೂಥ್ ಫೆಡರೇಷನ್ ಕಾರ್ಯಕರ್ತರ ಪ್ರತಿಭಟನೆ

ಕಲಬುರಗಿ : ಪ್ರೇಮಿಗಳಿಬ್ಬರು ಓಡಿ ಹೋಗಿ ಮದುವೆಯಾಗಿದ್ದಕ್ಕೆ ಯುವಕನ ತಂದೆ-ತಾಯಿಗೆ ಪೊಲೀಸರು ಠಾಣೆಯಲ್ಲಿ ಮನಬಂದಂತೆ ಥಳಿಸಿದ ಘಟನೆ ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಹಿಳಾ ಠಾಣೆ ಪೊಲೀಸರ ವಿರುದ್ಧ ಈಗಾಗಲೇ ದೂರು ದಾಖಲು ಮಾಡಿ ಐದು ದಿನಗಳಾದ್ರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ರಿಪಬ್ಲಿಕನ್ ಯೂಥ್ ಫೆಡರೇಷನ್ ಹಾಗೂ ಭೀಮ ಆರ್ಮಿ ನೇತೃತ್ವದಲ್ಲಿ ಐಜಿಪಿ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.

ಮೇಲ್ಜಾತಿಯ ಯುವತಿಯನ್ನು ದಲಿತ ಯುವಕ ಮದುವೆಯಾಗಿದ್ದಾನೆಂದು ಯುವಕನ ಪೋಷಕರ ಮೇಲೆ ದ್ವೇಷ ಸಾಧಿಸಲಾಗಿದೆ. ಯುವಕನ ಪೋಷಕರನ್ನು ಕರೆತಂದು ಠಾಣೆಯಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಲಾಗಿದೆ. ವಿಚಾರಣೆ ನೆಪದಲ್ಲಿ ಪೊಲೀಸರು ಅಮಾನುಷವಾಗಿ ವರ್ತಿಸಿದ್ದಾರೆ ಎಂದು ರಿಪಬ್ಲಿಕನ್ ಯೂಥ್ ಫೆಡರೇಷನ್ ಮುಖಂಡ ಸಂತೋಷ್ ಮೇಲ್ಮನಿ ಕಿಡಿಕಾರಿದರು.

ಈ ಕುರಿತಂತೆ ಪೊಲೀಸ್ ಇನ್ಸ್​ಪೆಕ್ಟರ್ ಸಂಗಮೇಶ್ ಪಾಟೀಲ ಹಾಗೂ ಪೇದೆ ನೆಹರೂ ಸಿಂಗ್ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಸೂಕ್ತ ಕ್ರಮಕೈಗೊಳ್ಳುಬೇಕು. ಜೊತೆಗೆ ಪೊಲೀಸರಿಂದ ದೌರ್ಜನ್ಯಕ್ಕೆ ತುತ್ತಾದ ತುಕಾರಾಂ ಹಾಗೂ ಸುಜಾತಾರಿಗೆ ನ್ಯಾಯ ಸಿಗಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.