ETV Bharat / city

ಲಂಚ ಮಂಚದ ಸರ್ಕಾರ.. ಪ್ರಿಯಾಂಕ್‌ ಖರ್ಗೆ ವಿರುದ್ಧದ ಹೇಳಿಕೆಗೆ ಕ್ಷಮೆ ಯಾಚಿಸಿದ ತೇಲ್ಕೂರ್​ - ಪ್ರಿಯಾಂಕ್‌ ಖರ್ಗೆ ವಿರುದ್ಧದ ಹೇಳಿಕೆಗೆ ಕ್ಷಮೆ ಯಾಚಿಸಿದ ತೇಲ್ಕೂರ್​

ಬಿಜೆಪಿ ಲಂಚ ಮಂಚದ ಸರ್ಕಾರ ಎಂಬ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಇದೀಗ ​ ಕ್ಷಮೆ ಯಾಚಿಸಿದ್ದಾರೆ.

Rajkumar Patil Telkur
ತೇಲ್ಕೂರ್​
author img

By

Published : Aug 18, 2022, 9:52 AM IST

ಕಲಬುರಗಿ: ಪ್ರಿಯಾಂಕ್‌ ಖರ್ಗೆ ಟೀಕಿಸುವ ಬರದಲ್ಲಿ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್​ ಆಡಿದ ಮಾತುಗಳು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಪ್ರಿಯಾಂಕ್‌ ಖರ್ಗೆ ಅಭಿಮಾನಿಗಳು ತೇಲ್ಕೂರ್​ಗೆ ಕರೆ‌ ಮಾಡಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ಇದರಿಂದ ಎಚ್ಚೆತ್ತ ತೇಲ್ಕೂರ್, ತಾವು ಆಡಿದ ಮಾತಿನ ಬಗ್ಗೆ ವಿಷಾದ ವ್ಯಕ್ತಪಡಿಸಿ ಈ ವಿಚಾರ ಕೈಬಿಡುವಂತೆ ಮನವಿ ಮಾಡಿದ್ದಾರೆ.

ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ವಿಡಿಯೋ

ಇತ್ತಿಚೀಗೆ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರ ಲಂಚ ಮಂಚದ ಸರ್ಕಾರ, ಯುವಕರು ಉದ್ಯೋಗ ಪಡೆಯಬೇಕಾದರೆ ಲಂಚ ಕೊಡಬೇಕು. ಯುವತಿಯರು ಉದ್ಯೋಗ ಪಡೆಯಬೇಕಾದರೆ ಮಂಚ ಹಂತಬೇಕು ಎಂಬ ವಿವಾದಾತ್ಮಕ ಹೇಳಿಕೆ ಮೂಲಕ ಸರ್ಕಾರವನ್ನು ಟೀಕಿಸಿದ್ದರು. ಇದಕ್ಕೆ ಪ್ರತ್ಯುತ್ತರ ಕೊಡುವ ಭರಾಟೆಯಲ್ಲಿ ಪ್ರಿಯಾಂಕ್ ಖರ್ಗೆ ಸಹೋದರಿಯರು ಹೀಗೆ ಹುದ್ದೆ ಪಡೆದಿದ್ದಾರಾ? ಎಂದು ವಿವಾದಾತ್ಮಕವಾಗಿ ರಾಜಕುಮಾರ ಪಾಟೀಲ್ ತೇಲ್ಕೂರ್​ ಹೇಳಿಕೆ ನೀಡಿದ್ದರು.

ಶಾಸಕ ತೇಲ್ಕೂರ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ, ನೇರವಾಗಿ ಶಾಸಕರಿಗೆ ಕರೆ ಮಾಡಿ ವಾಗ್ವಾದ ಮಾಡಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಇದೀಗ ಶಾಸಕ ತೇಲ್ಕೂರ್​ ವಿಡಿಯೋವೊಂದನ್ನ ಬಿಡುಗಡೆ ಮಾಡಿ ಕ್ಷಮೆ ಕೋರಿದ್ದಾರೆ.

'ಇದು ವೈಯಕ್ತಿಕ ಟೀಕೆಯಲ್ಲ, ಪ್ರಿಯಾಂಕ್ ಖರ್ಗೆ ಸಹೋದರಿಯರು ನನ್ನ ಸಹೋದರಿಯರು ಇದ್ದ ಹಾಗೆ. ವೈಯಕ್ತಿಕವಾಗಿ ಪ್ರಿಯಾಂಕ್ ಖರ್ಗೆ ಕುಟುಂಬವನ್ನು ಎಳೆದು ತಂದಿಲ್ಲ. ಇಡೀ ಭಾರತದ ನಾರಿಯರನ್ನು ಗೌರವಿಸುವಂತೆ ಹೇಳಿದ್ದೇನೆ. ನನ್ನ ಮಾತಿನಿಂದ ಪ್ರಿಯಾಂಕ್ ಖರ್ಗೆ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ‌. ಈ ವಿಷಯ ಇಲ್ಲಿಗೆ ಕೈಬೀಡಬೇಕೆಂದು' ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ನಾಡಿನ ಹೆಣ್ಣು ಮಕ್ಕಳಿಗೆ ಅವಮಾನವಾಗುವ ರೀತಿ ನನ್ನ ಮಾತುಗಳಲ್ಲಿ ಅರ್ಥೈಸಿಲ್ಲ: ಪ್ರಿಯಾಂಕ್​ ಖರ್ಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.