ಕಲಬುರಗಿ: ಕನ್ನಡ ಹಬ್ಬಕ್ಕೆ ಕಲಬುರಗಿ ಜಿಲ್ಲೆ ಸಜ್ಜಾಗಿದೆ. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಪೂರ್ವ ಸಿದ್ಧತೆ ನಡೆಸಿದ್ದು, ನವೆಂಬರ್ 2 ಮತ್ತು 3 ರಂದು ನಾಡಹಬ್ಬ ಆಚರಿಸಲಾಗುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದರು.
ಕಲಬುರ್ಗಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಲಬುರ್ಗಿಯ ಕನ್ನಡ ಭವನದಲ್ಲಿ ನವೆಂಬರ್ 2 ಮತ್ತು 3 ರಂದು ಎರಡು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಾಡಹಬ್ಬ ಆಚರಿಸಲಾಗುತ್ತದೆ. ಈ ಹಿನ್ನೆಲೆ ಕಾವ್ಯ-ಕುಂಚ-ಗಾಯನ ಮತ್ತು ಈ ಭಾಗದ ಪ್ರಸಿದ್ಧ ಜಾನಪದ ಹಾಗೂ ತತ್ವಪದಗಳ ಗಾಯನ ನಡೆಯಲಿದೆ. ಎರಡು ದಿನಗಳ ಕಾಲ ಜಾನಪದ-ತತ್ವಪದ ಗಾಯಕರಿಗೆ ದೊಡ್ಡ ವೇದಿಕೆ ನಿರ್ಮಿಸಿಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ