ETV Bharat / city

ಹೆಚ್​​ಕೆಸಿಸಿ ನೂತನ ಅಧ್ಯಕ್ಷರಾಗಿ ಪ್ರಶಾಂತ ಮಾನಕರ್ ಆಯ್ಕೆ

ಹೆಚ್​​ಕೆಸಿಸಿಗೆ ನಡೆದ ಚುನಾವಣೆಯಲ್ಲಿ 848 ಮತಗಳ ಅಂತರದಿಂದ ಪ್ರಶಾಂತ ಮಾನಕರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Prashanth Manakar elected as new President of HKCC
ಹೆಚ್​​ಕೆಸಿಸಿ ನೂತನ ಅಧ್ಯಕ್ಷರಾಗಿ ಪ್ರಶಾಂತ ಮಾನಕರ್ ಆಯ್ಕೆ
author img

By

Published : Mar 22, 2021, 12:04 PM IST

ಕಲಬುರಗಿ: ಹೈದರಾಬಾದ್​ ಕರ್ನಾಟಕ ವಾಣಿಜ್ಯ ಮತ್ತು ಔದ್ಯೋಗಿಕ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಪ್ರಶಾಂತ ಮಾನಕರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಳೆದ ಬಾರಿ ಹೆಚ್​​ಕೆಸಿಸಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಹಾಗೂ ಈ ಬಾರಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಮರನಾಥ ಪಾಟೀಲ್ 646 ಮತಗಳಿಂದ ಪರಭಾವಗೊಂಡಿದ್ದು, 848 ಮತಗಳ ಅಂತರದಿಂದ ಪ್ರಶಾಂತ ಮಾನಕರ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಇತಿಹಾಸ ಸೃಷ್ಟಿಸಿದ ಚುನಾವಣೆ ಫಲಿತಾಂಶ:

ಹೈದರಾಬಾದ್ ಕರ್ನಾಟಕ ಭಾಗದ ಪ್ರತಿಷ್ಠಿತ ಸಂಸ್ಥೆ ಹೆಚ್​​ಕೆಸಿಸಿಗೆ ಒಂದೇ ಪೆನಲ್​ನ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ. ಅಮರನಾಥ ಪಾಟೀಲ್ ಪೆನಲ್​ನ ಯಾವೊಬ್ಬ ಅಭ್ಯರ್ಥಿಯೂ ಆಯ್ಕೆಯಾಗಿಲ್ಲ. ಗೌರವ ಕಾರ್ಯದರ್ಶಿಯಾಗಿ ಶರಣು ಪಪ್ಪಾ ಅವಿರೋಧವಾಗಿ ಆಯ್ಕೆಯಾಗಿದ್ದು, 1,351 ಮತಗಳನ್ನು ಪಡೆಯುವ ಮೂಲಕ ರಾಜಶೇಖರ ಪಾಟೀಲ್ ಬೆಡಸೂರ ಉಪಾಧ್ಯಕ್ಷರಾಗಿ ವಿಜಯಮಾಲೆ ಧರಿಸಿದ್ದಾರೆ. ಖಜಾಂಚಿಯಾಗಿ ಸಿ.ಎ.ಗುರುದೇವ ದೇಸಾಯಿ, ಜಂಟಿ ಕಾರ್ಯದರ್ಶಿಯಾಗಿ ಅಮಿತ ಆರ್, ಎಂಸಿ ಮೇಂಬರ್ ಕಾರ್ಪೋರೆಟರ್ ಸೆಕ್ಟರ್‌ನಿಂದ ಡಾ.ಕೈಲಾಸ ಪಾಟೀಲ್, ಕರುಣೇಶ ಎಸ್. ಘಂಟಿ, ರಾಮಚಂದ್ರ ಬಿ. ಕೋಸಗಿ ಮತ್ತು ಸೈಯದ್​ ನಿಜಾಮುದ್ದಿನ್​ ಚಿಸ್ತಿ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆಯಾದವರ ವಿವರ:

ಮಹಾದೇವ ವಿ.ಖೇಣಿ, ಜಗದೀಶ ಆರ್.ಕಡಗಂಚಿ, ಕೇದಾರ ಎಸ್.ರಘೋಜಿ, ಮಹಾದೇವ ಎಸ್.ತಾವರಗೇರಾ, ಗಿರೀಶ ಜಗನ್ನಾಥ ಅಣಕಲ್, ಸಂಗಮೇಶ ರುದ್ರಶೆಟ್ಟಿ ಕಲ್ಯಾಣಿ, ನಾಗರಾಜ ಎಸ್. ನಿಗ್ಗುಡಗಿ, ರಾಮಕೃಷ್ಣ ವಿ.ಬೋರಾಳಕರ್, ಸಂದೀಪ ವಿ.ಮಿಶ್ರಾ, ಮನೀಷ ವಿ.ಜಾಜು, ಎ.ವೆಂಕಟ ಚಿಂತಾಮಣಿ ರಾವ್, ಮೃತ್ಯುಂಜಯ ಸಿ.ವಸ್ತದ, ಶರಣಬಸಪ್ಪ ಅಶೋಕ ಜೀವಣಗಿ, ಶ್ರೀನಿವಾಸ ನೋಗಜಾ, ಶರಣಬಸಪ್ಪ ಬಿ.ಬಿರಾಳ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.