ಕಲಬುರಗಿ : ಕೊರೊನಾ ಮಹಾಮಾರಿಯಿಂದಾಗಿ ಈ ಬಾರಿಯು 'ಈದ್ ಉಲ್ ಪಿತರ್' ರಂಜಾನ್ ಹಬ್ಬ ಕೇವಲ ರೋಜಾಗೆ ಮಾತ್ರ ಸೀಮಿತವಾಯಿತು. ಸಾಮೂಹಿಕ ಪ್ರಾರ್ಥನೆ ನಿಷೇಧಿಸಿರುವ ಹಿನ್ನೆಲೆ ಈದ್ಗಾ ಮೈದಾನಗಳು ಭಣಗುಡುತ್ತಿದ್ದವು.
ರಾಜ್ಯ ಸರ್ಕಾರ ಕೊರೊನಾ ಉಲ್ಬಣವಾಗಿತ್ತಿರುವ ಕಾರಣ ಲಾಕ್ಡೌನ್ ಜಾರೊಗೊಳಿಸಿದೆ. ಪ್ರಸಿದ್ಧ ಹಬ್ಬ ರಂಜಾನ್ ಮೇಲೆ ಕೋವಿಡ್ ಕರಿ ನೆರಳು ಆವರಿಸಿದೆ. ಸರ್ಕಾರದ ಮಾರ್ಗಸೂಚಿಯಂತೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ ಎಂದು ಪೊಲೀಸ್ ಕಮಿಷನರ್ ಸತೀಶ್ ಕುಮಾರ್ ಆದೇಶ ಹೊರಡಿಸಿದರು.
ಈದ್ಗಾ ಸೇರಿದಂತೆ ಯಾವುದೇ ಓಪನ್ ಸ್ಥಳ, ಮಸೀದಿ ಎಲ್ಲಿಯೂ ಸಾಮೂಹಿಕ ಪ್ರಾಥನೆಗೆ ಅವಕಾಶ ನೀಡಿರಲಿಲ್ಲ. ತಮ್ಮ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸುವ ಮೂಲಕ ಸರಳವಾಗಿ ಹಬ್ಬವನ್ನು ಆಚರಿಸುವಂತೆ ಸೂಚಿಸಿದರು. ಹಬ್ಬದ ಹಿನ್ನೆಲೆ ಅನಗತ್ಯವಾಗಿ ರಸ್ತೆಮೇಲೆ ಓಡಾಡುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಮುನ್ನೆಚರಿಕೆ ಕ್ರಮವಾಗಿ 4 ಕೆಎಸ್ಆರ್‌ಪಿ ತುಕಡಿ, 200 ಹೋಂಗಾರ್ಡ್ಸ್, 1000 ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ಗೆ ನಿಯೋಜನೆ ಮಾಡಲಾಗಿತ್ತು. ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಹೀಗಾಗಿ ಜಿಲ್ಲೆಯಲ್ಲಿ ಈ ಬಾರಿ ರಂಜಾನ್ ಕೇವಲ 30ದಿನದ ರೋಜಾಗೆ ಮಾತ್ರ ಸೀಮಿತವಾಯಿತು.