ಕಲಬುರಗಿ: ಕೊರೊನಾ ಸಂಕಷ್ಟದ ಸಮಯದಲ್ಲಿ ಜಿಲ್ಲೆಯ ನಯಾ ಸವೇರಾ ಸಂಘಟನೆಯ ಸದಸ್ಯರು ಕಳೆದ 9 ದಿನಗಳಿಂದ ಬಡವರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿರುವ ವಿಧಿಸಿರುವ ಲಾಕ್ಡೌನ್ನಿಂದಾಗಿ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಹೀಗಾಗಿ ಕಲಬುರಗಿಯ ನಯಾ ಸವೇರಾ ಸಂಘಟನೆಯ ಸದಸ್ಯರು ತಾವೇ ಆಹಾರ ತಯಾರಿಸಿ ಹಸಿದವರಿಗೆ ಹಂಚುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.
ಪ್ರತಿನಿತ್ಯ ನಗರದ ರಾಮತೀರ್ಥ, ಜೋಪಡ್ ಪಟ್ಟಿ, ಸಂತ್ರಸ್ವಾಡಿಯ ಆಶ್ರಯ ಕಾಲೋನಿ, ರಾಮನಗರ, ಚೌಪಟ್ಟಿ, ಕಣ್ಣಿ ಮಾರ್ಕೆಟ್, ಜೋಪಡಿ ಪಟ್ಟಿ, ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾ ಹಾಗೂ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ವಾಸಿಸುವ ನಿರ್ಗತಿಕರು, ಬಡವರಿಗೆ ಅವರಿದ್ದಲ್ಲಿಗೆ ತೆರಳಿ ಆಹಾರದ ಪೊಟ್ಟಣ ವಿತರಿಸುತ್ತಿರುವುದಾಗಿ ಸಂಘಟನೆ ಅಧ್ಯಕ್ಷ ಮೋದಿನ್ ಪಟೇಲ್ ಅಣಬಿ ತಿಳಿಸಿದ್ದಾರೆ.
ಇಂದು ಕೋವಿಡ್ ಸಮಯದಲ್ಲೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಮಹಾನಗರ ಪಾಲಿಕೆ ಪೌರಕಾರ್ಮಿಕರಿಗೆ ಆಹಾರ ವಿತರಿಸಲಾಯಿತು.
ಓದಿ: ಆರ್ಟಿ-ಪಿಸಿಆರ್ ಪರೀಕ್ಷೆ ನಂಬಿಕೆಗೆ ಅರ್ಹವೇ? ತಜ್ಞರ ಅಭಿಪ್ರಾಯ ಇಲ್ಲಿದೆ..