ಕಲಬುರಗಿ: ಚಿಂಚೋಳಿಯ ಚಂದಾಪೂರ ಬಸವನಗರದ ಬಳಿ ಇರುವ ಸಂಸದ ಉಮೇಶ್ ಜಾಧವ್ ಮನೆಯ ಹಿಂಭಾಗದಲ್ಲಿ ಹಂದಿಯೊಂದು ಎರಡು ನಾಯಿ ಮರಿಗಳಿಗೆ ಹಾಲುಣಿಸಿದೆ.
ಬಿಸಿಲು ಕಾಯಿಸಿಕೊಳ್ಳುತ್ತಿದ್ದ ಹಂದಿ ಸಮೀಪ ಆಗಮಿಸಿದ ನಾಯಿ ಮರಿಗಳು ಒಂದರ ನಂತರ ಒಂದು ಹಾಲು ಕುಡಿದು ಹೊಟ್ಟೆ ತುಂಬಿಸಿಕೊಂಡಿವೆ.
ಹಂದಿ ಮತ್ತು ನಾಯಿ ಮರಿಗಳ ನಡುವಿನ ತಾಯಿ ಮಗುವಿನ ಸಂಬಂಧ ನೋಡಿದ ಸಾರ್ವಜನಿಕರು ಪೊಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಈ ಚಿತ್ರಗಳು ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.