ETV Bharat / city

ಕಲಬುರಗಿ: ಬಸ್​​ಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಂಚಾರಕ್ಕೆ ಚಾಲನೆ - Bus service begin From Today

ರಾಜ್ಯದಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭವಾಗಲಿದ್ದು, ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.

KSRTC  Service Starts
ಪೂಜೆ ಸಲ್ಲಿಸುವ ಮೂಲಕ ಬಸ್​​​​ ಸಂಚಾರಕ್ಕೆ ಚಾಲನೆ
author img

By

Published : Jun 21, 2021, 8:16 AM IST

ಕಲಬುರಗಿ: ಇಂದಿನಿಂದ ರಾಜ್ಯದಲ್ಲಿ ಅನ್​ಲಾಕ್​​ 2.O ಜಾರಿಯಾಗಿದ್ದು, ಬಸ್​ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ, ಕಲಬುರಗಿ ಬಸ್ ನಿಲ್ದಾಣದಲ್ಲಿ ಬಸ್​​​​ಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಾರಿಗೆ ಸಿಬ್ಬಂದಿ ಸಂಚಾರಕ್ಕೆ ಚಾಲನೆ ನೀಡಿದ್ದು, ಹೈದರಾಬಾದ್​ಗೆ ತೆರಳಲು ಸಾರಿಗೆ ಬಸ್​ಗಳು ಸಿದ್ಧವಾಗಿ ನಿಂತಿವೆ.

ಪೂಜೆ ಸಲ್ಲಿಸುವ ಮೂಲಕ ಬಸ್​​​​ ಸಂಚಾರಕ್ಕೆ ಚಾಲನೆ

ಸುಮಾರು ಎರಡು ತಿಂಗಳ ನಂತರ ಬಸ್ ನಿಲ್ದಾಣದತ್ತ ಪ್ರಯಾಣಿಕರು‌ ಆಗಮಿಸುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಬೇರೆ ಬೇರೆ ಊರುಗಳಿಗೆ ಪ್ರಯಾಣಿಸಲು ಬಸ್ ಹತ್ತುತ್ತಿರುವ ದೃಶ್ಯಗಳು ಕಂಡುಬರುತ್ತಿದೆ. ಕಲಬುರಗಿ ಡಿಪೋ ವ್ಯಾಪ್ತಿಯ 200 ಸಾರಿಗೆ ಹಾಗೂ 20 ನಗರ ಸಾರಿಗೆ ಬಸ್‌ಗಳು ಇಂದು ರಸ್ತೆಗೆ ಇಳಿಯಲಿವೆ.

ಇದನ್ನೂ ಓದಿ: ಯೋಗಾಭ್ಯಾಸ ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಲಿ: ಸಿಎಂ ಯಡಿಯೂರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.