ಕಲಬುರಗಿ: ಈ ಸಾರಿಯ ಲೋಕಸಭಾ ಚುನುಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಘಟಾನುಘಟಿ ನಾಯಕರೇ ಸಿದ್ಧರಾಗಿದ್ದು, ಈ ಬಾರಿ ಖರ್ಗೆ ಸೋಲು ಖಚಿತ ಎಂದು ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಖರ್ಗೆಯವರು ಮಗನ ವ್ಯಾಮೋಹಕ್ಕೆ ಬಲಿಯಾಗಿ ಎಲ್ಲರನ್ನೂ ಕಾಂಗ್ರೆಸ್ನಿಂದ ಹೊರ ಹಾಕುತ್ತಿದ್ದಾರೆ. ನನಗೆ ಹಾಗೂ ಖಮರುಲ್ ಇಸ್ಲಾಂ ಅವರಿಗೆ ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಖರ್ಗೆ ಹೈಕಮಾಂಡ್ಗೆ ಒತ್ತಡ ಹೇರಿ ತಮ್ಮ ಪುತ್ರನಿಗೇ ಸಚಿವ ಸ್ಥಾನ ಕೊಡಿಸಿದ್ದರು. ಸಚಿವ ಸ್ಥಾನ ಕೈತಪ್ಪಿದ್ದರಿಂದಲೇ ಪಾಪ ಖಮರುಲ್ ಅವರು ಎದೆ ಒಡೆದುಕೊಂಡು ಸತ್ತರು ಎಂದು ದೂರಿದರು.
ಈ ಬಾರಿ ಖರ್ಗೆ ಸೋಲಿಗೆ ಘಟಾನು ಘಟಿ ನಾಯಕರು ಬರಲಿದ್ದಾರೆ ಎಂದು ಖರ್ಗೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.