ಕಲಬುರಗಿ: ನ.20ರಂದು ನಡೆಯಬೇಕಿದ್ದ ಕಲಬುರಗಿ ಮಹಾನಗರ ಪಾಲಿಕೆ ( (kalburgi corporation)) ಮೇಯರ್ - ಉಪಮೇಯರ್ ಚುನಾವಣೆಯನ್ನು( election) ಮುಂದೂಡಲಾಗಿದೆ.
ಪಾಲಿಕೆ ಚುನಾವಣೆ ಮುಂದೂಡಿ ಕಲಬುರಗಿ ಪ್ರಾದೇಶಿಕ ಆಯುಕ್ತ ಎನ್. ಪ್ರಸಾದ್(Regional Commissioner N Prasad) ಆದೇಶ ಹೊರಡಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆ ಘೋಷಣೆಯಲ್ಲಿ ಜಿಲ್ಲಾಡಳಿತ ಸಕ್ರೀಯವಾಗಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಚುನಾವಣೆ ಮುಂದೂಡಲಾಗಿದೆ ಎಂದು ಆರ್ಸಿ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಸೆ.3ರಂದು ನಡೆದ ಕಲಬುರಗಿ ಪಾಲಿಕೆ ಚುನಾವಣೆ ಬರೋಬರಿ ಎರಡು ತಿಂಗಳ ಬಳಿಕ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ 27 ಸ್ಥಾನಗಳನ್ನ ಗೆದ್ದರೆ, ಬಿಜೆಪಿ 23 ಹಾಗೂ ಜೆಡಿಸಿ 4 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಜತೆಗೆ ಒಬ ಪಕ್ಷೇತರ ಅಭ್ಯರ್ಥಿ ಜಯ ಭೇರಿ ಬಾರಿಸಿದರು.
ಚುನಾವಣೆ ಘೋಷಣೆಯಾಗಿದ್ದೇ ತಡ ಕಲಬುರಗಿ ಪಾಲಿಕೆ ಗದ್ದುಗೆ ಹಿಡಿಯಲು 3 ಪಕ್ಷದ ನಾಯಕರು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದರು. ಆದರೆ, ವಿಧಾನ ಪರಿಷತ್ ಅವಧಿ ಮುಗಿದಿರುವುದರಿಂದ ಪರಿಷತ್ ಚುನಾವಣೆ ನಡೆಸಲೆಬೇಕಾದ ಅನಿವಾರ್ಯತೆ ಇದೆ.
ಹೀಗಾಗಿ ವಿಧಾನ ಪರಿಷತ್ ಚುನಾವಣೆ ದಿನಾಂಕ ನಿಗದಿ ಮಾಡಿರುವುದರಿಂದ ಜಿಲ್ಲಾಡಳಿತ ಎಂಎಲ್ಸಿ(MLC) ಚುನಾವಣೆಯಲ್ಲಿ ಸಕ್ರಿಯವಾಗಿದೆ. ಆದ ಕಾರಣ ಕಲಬುರಗಿ ಪಾಲಿಕೆ ಚುನಾವಣೆಯನ್ನು ಮತ್ತೆ ಮುಂದೂಡಲಾಗಿದೆ. ಇದು ಮೂರು ಪಕ್ಷದ ನಾಯಕರಿಗೆ ಒಂದು ಕಡೆ ನಿರಾಸೆ ಉಂಟುಮಾಡಿದೆ.