ಕಲಬುರಗಿ: ಕೊನೆಗೂ ಚುನಾವಣಾ ಆಯೋಗ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದೆ. ಫೆಬ್ರವರಿ 5 ರಂದು ಮೇಯರ್, ಉಪ ಮೇಯರ್ ಚುನಾವಣೆಗೆ ಮತದಾನ ನಡೆಯಲಿದ್ದು, ಇದರ ಜತೆಗೆ ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಲಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕೆಟಗರಿ ಬದಲಾವಣೆ: ಏಕಾಏಕಿ ಮೇಯರ್, ಉಪ ಮೇಯರ್ ಕೆಟಗರಿ ಬದಲಾವಣೆ ಮಾಡಲಾಗಿದೆ. ಮೇಯರ್ ಪರಿಶಿಷ್ಟ ಜಾತಿ ಹಾಗೂ ಉಪ ಮೇಯರ್ ಸಾಮಾನ್ಯ ವರ್ಗಕ್ಕೆ ಮೀಸಲು ಮಾಡಿ ಆಯೋಗ ಆದೇಶಿಸಿದೆ. ಈ ಮೊದಲು ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾಗಿತ್ತು. ಈಗ ಏಕಾ ಏಕಿಯಾಗಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಬಿಡಿಎ ಭ್ರಷ್ಟರಿಗೆ ಚಳಿ ಬಿಡಿಸಿದ ಖಾಕಿ: ಆರು ಮಂದಿ ಆರೋಪಿಗಳ ಬಂಧನ