ಕಲಬುರ್ಗಿ : ಭಾರತದ 20 ಸೈನಿಕರ ಸಾವಿಗೆ ಕಾರಣರಾದ ಚೀನಾ ವಿರುದ್ಧ ಕಿಡಿ ಕಾರಿರುವ 3ನೇ ತರಗತಿ ವಿದ್ಯಾರ್ಥಿನಿ ಚೀನಾದ ಆಟಿಕೆಗಳನ್ನು ಮನೆಯಿಂದ ಹೊರಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಈ ಮೂಲಕ ಮಗುವಿನ ಸ್ವದೇಶಿ ಪ್ರೇಮ ಜನರನ್ನು ಮಂತ್ರಮುಗ್ಧರನ್ನಾಗಿಸುವಂತಿದೆ.
ಅಫ್ಜಲಪುರ ತಾಲೂಕಿನ ದೇವಲಗಾಣಗಾಪೂರ ನಿವಾಸಿ ನವೀನ್‌ಕುಮಾರ್ ಕುಲಕರ್ಣಿ ಎಂಬುವರ ಮಗಳು ನಿರೀಕ್ಷಾ, ಚೀನಾ ಗೋ ಬ್ಯಾಕ್ ಎಂದು ಕಿಡಿಕಾರಿದ್ದಾಳೆ.
ಗಡಿ ಭಾಗದಲ್ಲಿ ಚೀನಾ ನಡೆಸುತ್ತಿರುವ ವಿದ್ಯಮಾನದಿಂದ ಬೇಸತ್ತ ಬಾಲಕಿ, ಸ್ವಯಂ ಪ್ರೇರಿತವಾಗಿ ಇನ್ಮುಂದೆ ಚೀನಾದ ಆಟದ ವಸ್ತು ಬಳಸುವುದಿಲ್ಲ ಎಂದು ಶಪಥ ಮಾಡಿದ್ದಾಳೆ.
ಮೋದಿ ತಾತಾ ಹೇಳಿದಂತೆ ಸ್ವದೇಶಿ ವಸ್ತು ಬಳಸೋಣ. ಚೀನಾದಿಂದ ಬಂದಿರುವ ಯಾವುದೇ ವಸ್ತು ಖರೀದಿಸದೆ ಆರ್ಥಿಕವಾಗಿ ಚೀನಾಗೆ ವಿರೋಧಿಸುವಂತೆ ತನ್ನ ತೊದಲು ನುಡಿಯಲ್ಲಿಯೇ ಸಂದೇಶ ನೀಡಿದ್ದಾಳೆ.