ಕಲಬುರಗಿ: ಅಮವಾಸ್ಯೆಯಂದು ಅಫಜಲಪುರ ತಾಲೂಕಿನ ಪ್ರಸಿದ್ಧ ಘತ್ತರಗಿ ಭಾಗ್ಯವಂತಿ ದೇವಿಯ ದರ್ಶನಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಶರತ್ ಆದೇಶ ಹೊರಡಿಸಿದ್ದಾರೆ.
![ಘತ್ತರಗಿ ಭಾಗ್ಯವಂತಿ ದೇವಿಯ ದರ್ಶನಕ್ಕೆ ನಿಷೇಧ: ಡಿಸಿ ಆದೇಶ](https://etvbharatimages.akamaized.net/etvbharat/prod-images/kn-klb-04-no-gataragi-darshan-7208086_18082020000414_1808f_1597689254_471.jpg)
ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸುವ ಹಿನ್ನಲೆ ಕೊರೊನಾ ವೈರಸ್ ಹರಡುವ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ದರ್ಶನಕ್ಕೆ ನಿಷೇಧ ಹೇರಲಾಗಿದೆ. ನಾಳೆ (19) ಶ್ರಾವಣ ಮಾಸದ ಕೊನೆ ಅಮವಾಸ್ಯೆ ಇದೆ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆಯ ಕಾರಣ ಸಾರ್ವಜನಿಕ ದರ್ಶನಕ್ಕೆ ನಿಷೇಧ ಹೇರಿ ಡಿಸಿ ಆದೇಶಿಸಿದ್ದಾರೆ.
ದರ್ಶನಕ್ಕೆಂದು ಘತ್ತರಗಿಗೆ ಆಗಮಿಸದಿರಲು ಭಕ್ತರಲ್ಲಿ ಜಿಲ್ಲಾಧಿಕಾರಿ ಶರತ್ ಬಿ ಮನವಿ ಮಾಡಿದ್ದಾರೆ.