ETV Bharat / city

ಕಲಬುರಗಿ: 121 ಜನರಿಗೆ ಕೊರೊನಾ ಪಾಸಿಟಿವ್, ಓರ್ವ ಸಾವು - ಮೃತರಲ್ಲಿ ರೋಗಿ ನಂ. 170277, 82 ವರ್ಷದ ವೃದ್ಧ

ಇಂದು 121 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ ಒಟ್ಟು 4,094 ಜನರಲ್ಲಿ ಸೋಂಕು ದೃಢಪಟ್ಟಿದೆ.

Corona Positive for 121 people in kalaburagi
ವಿಜಯಪುರ: 121 ಜನರಿಗೆ ಕೊರೊನಾ ಪಾಸಿಟಿವ್, ಓರ್ವ ಸಾವು
author img

By

Published : Aug 11, 2020, 9:26 PM IST

ವಿಜಯಪುರ: ಕೊರೊನಾ ಶತಕದ ಮೇಲೆ ಶತಕ ಬಾರಿಸುತ್ತಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4 ಸಾವಿರ ತಲುಪಿದೆ.

ಇಂದು 121 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ ಒಟ್ಟು 4,094 ಜನರಲ್ಲಿ ಸೋಂಕು ದೃಢಪಟ್ಟಿದೆ.

ಗುಣಮುಖ:

ಇವತ್ತಿನ 197 ಜನ ಸೇರಿ ಇಲ್ಲಿಯವರೆಗೆ 3,099 ಜನ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ. ಇನ್ನೂ 952 ಜನ ಸೋಂಕಿತರು ಆಸ್ಪತ್ರೆ, ಹೋಮ್ ಕ್ವಾರಂಟೈನ್, ಹೋಮ್ ಐಸೊಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವತ್ತಿನ ಓರ್ವ ಸೋಂಕಿತ ಸೇರಿ ಇದುವರೆಗೆ 43 ಜನ ಸಾವನ್ನಪ್ಪಿದ್ದಾರೆ.

ಮೃತರಲ್ಲಿ (ರೋಗಿ ನಂ. 170277) 82 ವರ್ಷದ ವೃದ್ಧ ಕೆಮ್ಮು, ಶ್ವಾಸಕೋಶ ತೊಂದರೆಯಿಂದ ಆ.5ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆ.9 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯ ಸಂಸ್ಕಾರವನ್ನು ಶಿಷ್ಟಾಚಾರದಂತೆ ನೇರವೇರಿಸಲಾಗಿದೆ.

ಇಲ್ಲಿಯವರೆಗೆ 42,802 ಜನರ ಮೇಲೆ ನಿಗಾ ಇಡಲಾಗಿದೆ. 55,719 ಜನರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. 50,682 ಜನರ ವರದಿ ನೆಗೆಟಿವ್ ಬಂದಿದೆ. 4,094 ಜನರ ವರದಿ ಪಾಸಿಟಿವ್ ಬಂದಿದೆ. ಇನ್ನೂ 940 ಜನರ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.