ETV Bharat / city

ಭೂಗರ್ಭದಿಂದ ನಿಗೂಢ ಶಬ್ದಕ್ಕೆ ಗಡಿಕೇಶ್ವರ ಗ್ರಾಮಸ್ಥರು ಕಂಗಾಲು; ಕಾರಣ ಪತ್ತೆಗೆ ಆಗ್ರಹ - ಗಡಿಕೇಶ್ವರ ನಿಗೂಢ ಶಬ್ದ

ಪದೆ ಪದೆ ಭೂಮಿಯಿಂದ ಶಬ್ದವಾಗುತ್ತಿದ್ದು, ಕಂಪಿಸುವ ಅನುಭವವಾಗುತ್ತಿದೆ. ಇದರಿಂದಾಗಿ ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಭಾರೀ ಶಬ್ದದ ತೀವ್ರತೆಗೆ ಮನೆಯಲ್ಲಿನ ಪಾತ್ರೆ ಸಾಮಾನುಗಳು ಕೆಳಗೆ ಬಿದ್ದಿದ್ದು, ನಿಗೂಢ ಶಬ್ದಕ್ಕೆ ಗ್ರಾಮಸ್ಥರು ಬೆದರಿದ್ದಾರೆ.

chincholi-residence-getting-fear-from-mysterious-sound
ನಿಗೂಢ ಶಬ್ದ
author img

By

Published : Mar 15, 2021, 4:30 PM IST

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗ್ರಾಮಸ್ಥರು ಭೂಗರ್ಭದಿಂದ ಬರುತ್ತಿರುವ ಭಾರಿ ಶಬ್ದಕ್ಕೆ ಭಯ- ಭೀತರಾಗಿದ್ದಾರೆ. ಪ್ರತಿ‌ಕ್ಷಣವೂ ಎಲ್ಲಿ ಏನಾಗುತ್ತದೆ ಅಂತ ಜೀವ ಕೈಯಲ್ಲಿ ಹಿಡಿದು ಬದುಕು ಸಾಗಿಸುತ್ತಿದ್ದಾರೆ. ಈ ಮಧ್ಯೆ ಇಂದು ರಾತ್ರಿ 2:40ಕ್ಕೆ ಮತ್ತೆ ಕೇಳಿ ಬಂದ ಶಬ್ದ ಜನರ ನೆಮ್ಮದಿ ಕೆಡಿಸಿದೆ.

ಪದೆ ಪದೆ ಭೂಮಿಯಿಂದ ಶಬ್ದವಾಗುತ್ತಿದ್ದು, ಕಂಪಿಸುವ ಅನುಭವವಾಗುತ್ತಿದೆ. ಇದರಿಂದಾಗಿ ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಭಾರೀ ಶಬ್ದದ ತೀವ್ರತೆಗೆ ಮನೆಯಲ್ಲಿನ ಪಾತ್ರೆ ಸಾಮಾನುಗಳು ಕೆಳಗೆ ಬಿದ್ದಿದ್ದು, ನಿಗೂಢ ಶಬ್ದಕ್ಕೆ ಗ್ರಾಮಸ್ಥರು ಬೆದರಿದ್ದಾರೆ.

ಭೂ ಗರ್ಭದಿಂದ ಹೊಮ್ಮುವ ಶಬ್ದಕ್ಕೆ ಬೆಚ್ಚಿಬಿದ್ದ ಚಿಂಚೋಳಿ ಜನರು

ಶಬ್ದದ ಮೂಲ ಪತ್ತೆ ಹಚ್ಚದ ಅಧಿಕಾರಿಗಳು

ಸುಮಾರು ಆರು ಸಾವಿರ ಜನ ಸಂಖ್ಯೆ ಹೊಂದಿರುವ ಈ ಗಡಿಕೇಶ್ವರ ಗ್ರಾಮಸ್ಥರಿಗೆ ಕಳೆದ ನಾಲ್ಕು ವರ್ಷಗಳಿಂದ ನಿಗೂಢ ಶಬ್ದ ನಿದ್ದೆಗೆಡಿಸಿದೆ. ತಿಂಗಳು, ಎರಡು ತಿಂಗಳಿಗೊಮ್ಮೆ ಕಳೆದ ನಾಲ್ಕು ವರ್ಷದಿಂದ ಗ್ರಾಮದಲ್ಲಿ ಭೂಗರ್ಭದಿಂದ ಆಗಾಗ ಭಾರೀ ಶಬ್ದ ಕೇಳಿ ಬರುತ್ತಲೇ ಇದೆ. ಅಲ್ಲದೆ ಭೂಕಂಪ ಆದ ಅನುಭವ ಆಗ್ತಿದೆಯಂತೆ.

ಗ್ರಾಮದ ಸುತ್ತಲೂ ಯಾವುದೇ ಕಲ್ಲಿ ಕ್ವಾರಿಗಳು ಇಲ್ಲ, ಆದ್ರೂ ಶಬ್ದ ಕೇಳಿಬರುತ್ತಿದೆ. ಈ ರೀತಿ ಭೂಮಿಯಿಂದ ಶಬ್ದ ಕೇಳಿ ಬಂದಾದ, ಮಾಧ್ಯಮಗಳಲ್ಲಿ ವರದಿ ಆದಾಗ ಮಾತ್ರ ತಹಶೀಲ್ದಾರ್, ವಿಎ ಸೇರಿದಂತೆ ಹಲವು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟು ಹೋಗಿದ್ದಾರೆ. ಆದ್ರೆ ಭಾರಿ ಶಬ್ದದ ಬಗ್ಗೆ ನಿಖರ ಕಾರಣ ಪತ್ತೆ ಹಚ್ಚುವ ಕೆಲಸ ಅಧಿಕಾರಿಗಳು ಮಾಡಿಲ್ಲ.

ಒಟ್ಟಿನಲ್ಲಿ ಅನಾಹುತ ಸಂಭವಿಸುವ ಮು‌ನ್ನ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು, ಭೂಮಿಯಿಂದ ಬರುತ್ತಿರುವ ನಿಗೂಢ ಶಬ್ದದ ಮೂಲ ಪತ್ತೆ ಹಚ್ಚಿ ಆತಂಕ ದೂರ ಮಾಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.