ಕಲಬುರಗಿ: ಆರೋಗ್ಯ ಇಲಾಖೆಯವರು ಕರೆಮಾಡಿ, ನಿಮಗೆ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಕ್ಕೆ ಆಘಾತಕ್ಕೊಳಗಾಗಿ ನೆಲದ ಮೇಲೆ ಕುಸಿದು ಬಿದ್ದ ಅಟೋ ಚಾಲಕ ಸಾವನ್ನಪ್ಪಿರುವ ಘಟನೆ ಕಲಬುರಗಿಯ ಭವಾನಿ ನಗರದಲ್ಲಿ ನಡೆದಿದೆ.
ಅಟೋ ಚಾಲಕ ಅಶೋಕ (55) ಮೃತ ವ್ಯಕ್ತಿ. ಅಳಿಯನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಶೋಕ ಮತ್ತು ಆತನ ಕುಟುಂಬದವರು ಜುಲೈ 8 ರಂದು ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದರು. ಇಲ್ಲಿಯವರೆಗೆ ಯಾವುದೇ ವರದಿ ಬರದ ಕಾರಣ ನೆಗೆಟಿವ್ ಇರಬಹುದು ಎಂದು ಅಶೋಕ ನಿರಾಳವಾಗಿದ್ದ.
ಆದ್ರೆ ಹದಿನೈದು ದಿನಗಳ ನಂತರ ಇಂದು ಆರೋಗ್ಯ ಇಲಾಖೆ ಸಿಬ್ಬಂದಿ ಕರೆಮಾಡಿ ನಿಮಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ ಎಂದು ತಿಳಿಸಿದಾಗ ಸುದ್ದಿ ಕೇಳಿದ ಅಶೋಕ ನೆಲಕ್ಕೆ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ದುರಾದೃಷ್ಟ ಅಂದ್ರೆ ಆಸ್ಪತ್ರೆಗೆ ಶವತಂದು ಮರಣೋತ್ತರ ಕೊರೊನಾ ಪರೀಕ್ಷೆ ಮಾಡಿದಾಗ ವರದಿ ನೆಗಟಿವ್ ಬಂದಿದೆ. 15 ದಿನ ವರದಿಯ ವಿಳಂಬದಿಂದಾಗಿ ಒಂದು ಜೀವ ಬಲಿಯಾದಂತಾಗಿದೆ.