ಕಲಬುರಗಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಸಹಾಯಕ ತೋಟಾಧಿಕಾರಿ ರಾಜಕುಮಾರ ಗೋವಿನ್ ಎಂಬುವವರಿಗೆಗೆ ಜಿಲ್ಲಾ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಕಳೆದ 2020 ಫೆ.13 ರಂದು ನಗರದ ಬಾಳೆ ಲೇಔಟ್ ಪ್ರದೇಶದಲ್ಲಿರುವ ಕಟ್ಟಡ ವಿಷಯವಾಗಿ ಸಹಾಯಕ ತೋಟಾಧಿಕಾರಿ ರಾಜಕುಮಾರ ತನ್ನ ಪಕ್ಕದ ಮನೆಯ ದಿ. ವಿಠ್ಠಲ್ ಖೇಡ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ 2ನೇೆಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ ನೇಸರ್ಗಿ ಅವರು, ವಾದ ಪ್ರತಿವಾದ ಆಲಿಸಿ ತಪ್ಪು ಸಾಬೀತಾದ ಕಾರಣಕ್ಕೆ ಆಪಾದಿತ ರಾಜಕುಮಾರಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸಹಾಯಕ ಕಿರಿಯ ಅಭಿಯೋಜಕಿ ಶ್ರೀಮತಿ ಲತಾ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಇದನ್ನೂ ಓದಿ: ನಿವೃತ್ತ ನ್ಯಾಯಾಂಗ ಅಧಿಕಾರಿ ಹತ್ಯೆ ಪ್ರಕರಣ.. 8 ವರ್ಷಗಳ ಬಳಿಕ ಅಪರಾಧಿಗೆ ಶಿಕ್ಷೆ ಪ್ರಕಟ