ETV Bharat / city

ಸೇಂದಿ ಮಾರಾಟ, ನಾರಾಯಣಗುರು ನಿಗಮ ಮಂಡಳಿ ರಚಿಸುವಂತೆ ಒತ್ತಾಯಿಸಿ ಆಮರಣಾಂತ ಉಪವಾಸ - ಸುಮನ್​

ರಾಜ್ಯದಲ್ಲಿ ನಿಷೇಧ ಮಾಡಿರುವ ಸೇಂದಿ ಮಾರಾಟ ಹಾಗೂ ನಾರಾಯಣ ಗುರು ನಿಗಮ ಮಂಡಳಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರಣವಾನಂದ ಸ್ವಾಮೀಜಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

Arya Eediga community Pranavananda Swamiji protest in Kalaburagi
ಪ್ರಣವಾನಂದ ಸ್ವಾಮೀಜಿಯಿಂದ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ
author img

By

Published : Jun 20, 2022, 11:00 PM IST

ಕಲಬುರಗಿ: ಕಲ್ಯಾಣ ಕರ್ನಾಟಕದ ಈಡಿಗ ಹೋರಾಟ ಸಮಿತಿ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ತೀವ್ರ ಹೋರಾಟಕ್ಕೆ ಧುಮುಕಿದೆ. ಬೇಡಿಕೆಗಳಿಗಾಗಿ ನಿರಂತರ ಹೋರಾಟ, ಪಾದಯಾತ್ರೆ ಮಾಡಿದರೂ ಸರ್ಕಾರ ಸ್ಪಂದಿಸದ ಕಾರಣ ಪ್ರಣವಾನಂದ ಸ್ವಾಮೀಜಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಬಹುಭಾಷಾ ನಟ ಸುಮನ್ ಕೂಡ ಸಾಥ್ ನೀಡಿದ್ದಾರೆ.

ರಾಜ್ಯದಲ್ಲಿ ನಿಷೇಧ ಮಾಡಿರುವ ಸೇಂದಿ ಮಾರಾಟ ಹಾಗೂ ನಾರಾಯಣ ಗುರು ನಿಗಮ ಮಂಡಳಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರಣವಾನಂದ ಸ್ವಾಮೀಜಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಸ್ವಾಮೀಜಿ ಕಳೆದ ತಿಂಗಳಷ್ಟೇ ಸುಮಾರು 178 ಕಿಲೋ ಮೀಟರ್​ ನಡೆದು ಸರ್ಕಾರಕ್ಕೆ ಒತ್ತಾಯಿಸಿದ್ದರು ಆದರೆ ಅದು ಫಲ ನೀಡ ಹಿನ್ನಲೆಯಲ್ಲಿ ಉಪವಾಸ ಮಾಡುವ ಮುಖಾಂತರ ಹೋರಾಟಕ್ಕೆ ಮುಂದಾಗಿದ್ದಾರೆ.

ಮನವೊಲಿಸಲು ಯತ್ನ: ಶ್ರೀಗಳ ಉಪವಾಸ ಸತ್ಯಾಗ್ರಹಕ್ಕೆ ಕಾಂಗ್ರೆಸ್ ನಾಯಕರು, ಆರ್ಯ ಈಡಿಗ ಸಮುದಾಯ ಸಂಪೂರ್ಣ ಬೆಂಬಲ ನೀಡಿದ್ದು, ಹೋರಾಟ ತೀವ್ರಗೊಳ್ಳುತ್ತಿದೆ. ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಸಂಸದ ಉಮೇಶ್ ಜಾಧವ್ ಶ್ರೀಗಳ ಮನವೊಲಿಸುವ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ. ಈಡಿಗ ಸಮದಾಯದ ಮಂತ್ರಿ, ಶಾಸಕರ ವಿರುದ್ದ ಗುಡುಗಿದ ಶ್ರೀಗಳು, ಸರ್ಕಾರದಿಂದ ಬೇಡಿಕೆ ಈಡೆರಿಸುವ ಭರವಸೆ ಸಿಗೋವರೆಗೂ ಉಪವಾಸ ಸತ್ಯಾಗ್ರಹ ನಿಲ್ಲೋದಿಲ್ಲ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್​ನಿಂದ ಬೆಂಬಲ: ಶ್ರೀಗಳ ಉವಾಸ ಸತ್ಯಾಗ್ರಹಕ್ಕೆ ಕಾಂಗ್ರೆಸ್​ನ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್, ಕೆಪಿಸಿಸಿ ವಕ್ತಾರ ಪ್ರಿಯಾಂಕ್​ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.

ನಟ ಸುಮನ್​ ಸಾಥ್​: ಬಹುಭಾಷಾ ನಟ ಸುಮನ್ ಕೂಡ ಹೋರಾಟಕ್ಕೆ ಸಾಥ್ ಕೊಟ್ಟಿದ್ದಾರೆ. ಬೇರೆ ರಾಜ್ಯಗಳಲ್ಲಿ ಸೇಂಧಿಗೆ ಅವಕಾಶ ಇದೆ‌. ಕರ್ನಾಟಕದ ಮಂಗಳೂರು, ಉಡುಪಿ ಸೇರಿ ಕರಾವಳಿ ಭಾಗದಲ್ಲಿ ಮಾತ್ರ ಸೇಂಧಿ ಮಾರಾಟಕ್ಕೆ ಅವಕಾಶ ಇದ್ದು, ಉತ್ತರ ಕರ್ನಾಟಕದಲ್ಲಿ ಮಲತಾಯಿ ಧೋರಣೆ ಯಾಕೆ? ಎಂದು ನಟ ಸುಮನ್​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕೋಟಿ ಕೋಟಿ ತೆರಿಗೆ ಕಟ್ಟದೆ ಶಾಪಿಂಗ್‌ ಮಾಲ್​ಗಳ ಕಳ್ಳಾಟ; ಕ್ರಮಕ್ಕೆ ಮುಂದಾದ ಬಿಬಿಎಂಪಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.