ETV Bharat / city

Kalaburagi ACB Raid: ಡ್ರೈನೇಜ್​ ಪೈಪಲ್ಲಿ ಹರಿದು ಬಂತು ಹಣ.. ಪಿಡಬ್ಲ್ಯೂಡಿ ಜೆಇ ಪ್ಲಾನ್​ಗೆ ಎಸಿಬಿ ಅಧಿಕಾರಿಗಳೇ ದಂಗು - Money in the water pipe

ಪಿಡಬ್ಲೂಡಿ ಜೆ.ಇ. ಶಾಂತಗೌಡರ ಮನೆಯ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಮುಂದುವರಿದಿದೆ. ದಾಳಿಗೂ ಮುನ್ನ ಶಾಂತಗೌಡ ಅವರು ಪ್ಲಂಬಿಂಗ್​ ಪೈಪ್​ನಲ್ಲಿ ಹಣದ ಕಂತೆಗಳನ್ನು ಹಾಕಿದ್ದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

kalaburgi ACB Raid
ನೀರಿನ ಪೈಪಲ್ಲಿ ಹರಿದು ಬಂತು ದುಡ್ಡು
author img

By

Published : Nov 24, 2021, 2:05 PM IST

Updated : Nov 25, 2021, 12:04 AM IST

ಕಲಬುರಗಿ: ನಗರದ ಗುಬ್ಬಿ ಕಾಲೋನಿಯಲ್ಲಿರುವ ಪಿಡಬ್ಲೂಡಿ ಜೆ.ಇ. ಶಾಂತಗೌಡ ಮನೆಯ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಮುಂದುವರಿದಿದೆ. ದಾಳಿಗೂ ಮುನ್ನ ಶಾಂತಗೌಡ ಅವರು ಡ್ರೈನೇಜ್​​ ಪೈಪ್​ನಲ್ಲಿ ಕಂತೆ ಕಂತೆ ಹಣ ಹಾಕಿದ್ದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಡ್ರೈನೇಜ್​ ಪೈಪಲ್ಲಿ ಹರಿದು ಬಂತು ಕಂತೆ ಕಂತೆ ಹಣ..!

ಶಾಂತಗೌಡ ಅವರ ಮನೆಯ ಪೈಪ್​ಗಳಲ್ಲಿ ಹಣದ ಜೊತೆಗೆ ಚಿನ್ನಾಭರಣ ಕೂಡ ಪತ್ತೆಯಾಗಿವೆ ಎಂಬ ಮಾಹಿತಿ ಸಿಕ್ಕಿದೆ. ಇಂದು ಬೆಳಗಿನ ಜಾವ ಎಸಿಬಿ ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸಿದಾಗ ಅನುಮಾನಗೊಂಡ ಶಾಂತಗೌಡ 10 ನಿಮಿಷ ಬಾಗಿಲು ತೆರೆಯದೆ ಸತಾಯಿಸಿದ್ದರು. ಈ ವೇಳೆ ಪೈಪ್​ನಲ್ಲಿ ಹಣ, ಚಿನ್ನಾಭರಣವನ್ನು ಬಿಸಾಕಿದ್ದಾರೆ ಎಂದು ಹೇಳಲಾಗ್ತಿದೆ.

ಪಿಡಬ್ಲೂಡಿ ಜೆ.ಇ. ಶಾಂತಗೌಡರ ಮನೆಯ ಮೇಲೆ ಎಸಿಬಿ ಅಧಿಕಾರಿಗಳ ದಾಳಿ

ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ: ಕೃಷಿ ಇಲಾಖೆ ಜಂಟಿ ನಿರ್ದೇಶಕನ ಮನೆ ಮೇಲೆ ಎಸಿಬಿ ದಾಳಿ

ಮನೆಯನ್ನು ತಪಾಸಣೆ ನಡೆಸಿದ ಅಧಿಕಾರಿಗಳಿಗೆ ಪೈಪ್​ನಲ್ಲಿ ಹಣ ಇರುವುದು ಗೊತ್ತಾಗಿ, ಪ್ಲಂಬರ್​ ಒಬ್ಬನನ್ನು ಕರೆಯಿಸಿ ಪೈಪ್ ಕಟ್ ಮಾಡಿಸಿದಾಗ ಹಣ ಪತ್ತೆಯಾಗಿದೆ. ಈಗಾಗಲೇ ಮನೆಯಲ್ಲಿ 40 ಲಕ್ಷಕ್ಕಿಂತ ಅಧಿಕ ನಗದು, ಚಿನ್ನಾಭರಣ ಪತ್ತೆಯಾಗಿದೆ.

ಶೋಧ ಕಾರ್ಯ ಮುಂದುವರೆದಿದ್ದು, ಇನ್ನೂ 2 ಲಾಕರ್​ಗಳ ಕೀ ನೀಡದೆ ಶಾಂತಗೌಡ ಸತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Last Updated : Nov 25, 2021, 12:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.