ಕಲಬುರಗಿ: ವೇತನ ಬಿಡುಗಡೆಗೆ ಲಂಚ ಪಡೆಯುತ್ತಿದ್ದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಎಫ್‌ಡಿಎ ಅಧಿಕಾರಿ ರೆಡ್‌ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಎಫ್‌ಡಿಎ ಆಗಿರುವ ಹುಸೇನ್ ಬಾಷಾ, ನಿವೃತ್ತ ಶಿಕ್ಷಕರೊಬ್ಬರ ವೇತನ ಬಿಡುಗಡೆ ಮಾಡಲು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈ ಬಗ್ಗೆ ನಿವೃತ್ತ ಶಿಕ್ಷಕ ದತ್ತುಕುಮಾರ ದೇವಣಿ ಎಸಿಬಿಗೆ ದೂರು ನೀಡಿದ್ದರು.
ಕಳೆದ ರಾತ್ರಿ ಕಲಬುರಗಿಯ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದ ಬಳಿಯ ಜೆಸಿಪಿ ಹೋಟೆಲ್ ಹತ್ತಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಓದಿ: ಕೋವಿಡ್ ಕೇರ್ ಸೆಂಟರ್ನಲ್ಲಿ ‘ಯಾರೇ ನೀನು ರೋಜಾ ಹೂವೆ’ ಹಾಡಿಗೆ ರೇಣುಕಾಚಾರ್ಯ ಸಖತ್ ಡ್ಯಾನ್ಸ್!