ETV Bharat / city

ದಡ ಸೇರುವ ಮುನ್ನ ಮೃತ್ಯು ಮನೆ ಸೇರಿದ ಯುವಕ... ಮೊಬೈಲ್​ನಲ್ಲಿ ಸೆರೆಯಾಯ್ತು ಭಯಾನಕ ಸಾವಿನ ವಿಡಿಯೋ

author img

By

Published : Nov 16, 2019, 7:03 AM IST

Updated : Nov 16, 2019, 7:16 AM IST

ಈಜುವಾಗ ತಲೆಗೆ ಬಲವಾದ ಪೆಟ್ಟು ಬಿದ್ದು ಪ್ರಜ್ಞೆ ತಪ್ಪಿದ ಪರಿಣಾಮ ನೀರಿನಿಂದ ಮೇಲೇಳಲಾಗದೆ ಸ್ನೇಹಿತರ ಕಣ್ಣಮುಂದೆಯೇ ಯುವಕನೋರ್ವ ಸಾವನ್ನಪ್ಪಿದ್ದಾನೆ.

A young man died at swimming

ಕಲಬುರಗಿ: ಈಜುವಾಗ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ನೀರಿನಿಂದ ಮೇಲೇಳಲಾಗದೆ ಯುವಕನೋರ್ವ ತನ್ನ ಸ್ನೇಹಿತರ ಕಣ್ಣಮುಂದೆಯೇ ಸಾವನ್ನಪ್ಪಿದ್ದಾನೆ.

ಯುವಕ ನೀರಿಗೆ ಜಿಗಿಯುವುದು, ಈಜಾಡುವುದು, ಕೊನೆಯಲ್ಲಿ ನೀರಿಂದ ಮೇಲೆ ಬಾರಲು ಆಗದೆ ಒದ್ದಾಡುತ್ತಾ ಸಾವನ್ನಪ್ಪಿರುವ ದೃಶ್ಯ ಮೊಬೈಲ್ ವಿಡಿಯೋದಲ್ಲಿ ಸೆರೆಯಾಗಿದೆ.

swimming
ಮೃತ ಯುವಕ

ನಗರದ ಹೊರವಲಯ ರುಕಮೋದ್ದಿನ್ ತೋಲಾ ದರ್ಗಾ ಹತ್ತಿರದ ಕಲ್ಲಿನ ಖಣಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನವಾಜ್ ದರ್ಗಾ ಹತ್ತಿರದ ಮಿಜಗುರಿ ಬಡಾವಣೆ ನಿವಾಸಿ ಜಾಫರ್ ಅಯುಬ್ (22) ಮೃತ ದುರ್ದೈವಿ.

ಮೊಬೈಲ್​​ನಲ್ಲಿ ಸೆರೆಯಾದ ಸಾವಿನ ದೃಶ್ಯ

ಜಾಫರ್ ಸ್ನೇಹಿತರೊಂದಿಗೆ ಅಯುಬ್​ ಕಲ್ಲಿನ ಕಣಿಯಲ್ಲಿ ಈಜಾಡಲು ಹೋಗಿದ್ದ. ಈಜುವಾಗ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದ ಪರಿಣಾಮ ನೀರಿನಿಂದ ಮೇಲೆ ಬಾರಲು ಆಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತ ಯುವಕನ ಶವ ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಲಬುರಗಿ: ನೀರಿನಲ್ಲಿ ಈಜುವಾಗ ಪ್ರಜ್ಞೆ ತಪ್ಪಿ ಯುವಕನೋರ್ವ ನೀರುಪಾಲಾದ ದಾರುಣ ಘಟನೆ ನಗರದ ಹೊರವಲಯ ರುಕಮೋದ್ದಿನ್ ತೋಲಾ ದರ್ಗಾದ ಹತ್ತಿರದ ಕಲ್ಲಿನ ಖಣಿಯಲ್ಲಿ ನಡೆದಿದೆ.

Body:ಜಾಫರ್ ಅಯುಬ್ (22) ಮೃತಪಟ್ಟ ದುರ್ದೈವಿ ಯುವಕ ಎಂದು ಗುರುತಿಸಲಾಗಿದೆ. ಇಲ್ಲಿನ ಖ್ವಾಜಾ ಬಂದಾ ನವಾಜ್ ದರ್ಗಾ ಹತ್ತಿರದ ಮಿಜಗುರಿ ಬಡಾವಣೆಯ ನಿವಾಸಿಯಾಗಿದ್ದ ಜಾಫರ್ ಸ್ಹೇಹಿತರೊಂದಿಗೆ ಕಲ್ಲಿನ ಖಣಿಯಲ್ಲಿ ಈಜಾಡಲು ಹೋಗಿದ್ದಾಗ ನೀರಿನಲ್ಲಿ ಗಂಭೀರವಾಗಿ ಪೆಟ್ಟು ಬಿದ್ದಿರುವುದರಿಂದ ನೀರಿನಲ್ಲೇ ಸಾವನಪ್ಪಿದ್ದಾನೆಂದು ತಿಳಿದುಬಂದಿದೆ.

ಯುವಕ ನೀರಿಗೆ ಜಿಗಿಯುವದು, ಈಜಾಡುವದು ಹಾಗೂ ಕೊನೆಯಲ್ಲಿ ಮೇಲೆ ಬಾರಲು ಆಗದೆ ನೀರುಪಾಲಾದ ದೃಶ್ಯ ಮೊಬೈಲ್ ವಿಡಿಯೋದಲ್ಲಿ ಸೇರೆಯಾಗಿದ್ದು, ದೃಶ್ಯಗಳು ಮನ ಕಲಕುವಂತಿವೆ. ವಿಷಯ ಅರಿತ ಗ್ರಾಮೀಣ ಠಾಣೆ ಪಿ.ಎಸ್. ಸೋಮಲಿಂಗಪ್ಪ ಕಿರದಳಿ ಹಾಗೂ ಎಸ್.ಎಸ್ ದೊಡ್ಡಮನಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತ ಯುವಕನ ಶವ ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.Conclusion:
Last Updated : Nov 16, 2019, 7:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.