ಕಲಬುರಗಿ: ಲಾಕ್‌ಡೌನ್ ಹಾಗೂ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ಗಾಗಿ ನಡೆಯುತ್ತಿದ್ದ ಪರದಾಟ ತಪ್ಪಿದೆ.
ಸದ್ಯ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಮೀಸಲಿರಿಸಿದ 99 ಐಸಿಯು ಬೆಡ್ಗಳ ಪೈಕಿ 20, 75 ಹೆಚ್ಡಿಯ ಬೆಡ್ಗಳ ಪೈಕಿ 39 ಹಾಗೂ 230 ಐಸೋಲೇಷನ್ ಬೆಡ್ಗಳ ಪೈಕಿ 157 ಬೆಡ್ಗಳು ಖಾಲಿ ಇವೆ ಎಂದು ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ್ ಮಾಹಿತಿ ನೀಡಿದ್ದಾರೆ.
ಅಲ್ಲದೆ, ಆಕ್ಸಿಜನ್ ವೆಂಟಿಲೇಟರ್ಗಳ ಕೊರತೆಯೂ ಬಹುತೇಕ ಸರಿಯಾಗಿದೆ. ಜಿಮ್ಸ್ ಆಸ್ಪತ್ರೆಯಲ್ಲಿರುವ 60 ಜಂಬೊ ಸಿಲಿಂಡರ್ ಮೂಲಕವೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚುವರಿ ಸಿಲಿಂಡರ್ ಅಗತ್ಯ ಕಂಡುಬರುತ್ತಿಲ್ಲ. ಇದರಿಂದಾಗಿ ಜಿಲ್ಲೆಯ ಜನರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಶುಕ್ರವಾರ ಜಿಲ್ಲೆಯಲ್ಲಿ 91 ಪಾಸಿಟಿವ್ ಪ್ರಕರಣಗಳು ಪತ್ತೆಯಾದರೆ, ಐವರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. 441 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2,576 ಸಕ್ರಿಯ ಪ್ರಕರಣಗಳಿವೆ.
ಓದಿ:ಕಟ್ಕೊಂಡ ಹೆಂಡ್ತಿಯನ್ನೇ ಇನ್ನೊಬ್ಬನಿಗೆ ಧಾರೆ ಎರೆದ ಪತಿರಾಯ.. ಇದೊಂಥರಾ ವಿಲಕ್ಷಣ!