ಕಲಬುರಗಿ: ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಹಜರತ್ ಗಾಯಬ್ ಪೀರ್ ಸಾಹೇಬ್ ಜಾತ್ರೆಯನ್ನು (ಉರೂಸ್) ಸರಳವಾಗಿ ನಡೆಸಲಾಗಿತ್ತು. ಆದರೆ, ಈ ವರ್ಷ ಸರ್ವ ಧರ್ಮದವರೂ ಸೇರಿ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಜಾತಿ ಬೇಧ ಮರೆತು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಜಾತ್ರೆಗೆ ಬನ್ನೂರು ಹಾಗೂ ಅಕ್ಕಪಕ್ಕದ ಊರಿನ ಜನರು ಆಗಮಿಸಿದ್ದರು.
ಭಕ್ತರು ನೈವೇದ್ಯ, ತೆಂಗು, ಗಾಲಿಬ್, ಹೂವು ಸಮರ್ಪಿಸಿ ಭಕ್ತಿ ಮೆರೆದರು. ಹಳ್ಳಿ ಸೊಗಡಿನ ಗಾಗಿಯಪದಗಳು, ಜಂಗಿಕುಸ್ತಿ ಜಾತ್ರೆ ಸಂಭ್ರಮವನ್ನು ಇಮ್ಮಡಿಗೊಳಿಸಿತು. ವಿವಿಧೆಡೆಯಿಂದ ಆಗಮಿಸಿದ ಕುಸ್ತಿಪಟುಗಳು ಕುಸ್ತಿಯಲ್ಲಿ ಭಾಗಿಯಾಗಿದ್ದರು. ಈ ಸ್ಪರ್ಧೆಯಲ್ಲಿ ಗೆದ್ದ ಕಾಶಿರಾಮ ಜವಳಗಿ ಅವರಿಗೆ ನಗದು ಬಹುಮಾನ ಮತ್ತು 5 ತೊಲ ಬೆಳ್ಳಿ ಕಡಗ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ನಿಂದಿಸಿದ ಯುವಕನಿಗೆ ಬುದ್ಧಿವಾದ ಹೇಳಿದೆ ಅಷ್ಟೇ: ಶಾಸಕ ವೆಂಕಟರಮಣಪ್ಪ ಸ್ಪಷ್ಟನೆ