ಹುಬ್ಬಳ್ಳಿ: ಸಿಐಟಿಯು ಕರೆ ನೀಡಿದಂತೆ ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೀಡಾದ ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ಸಹಾಯ ಘೋಷಿಸಲು ಒತ್ತಾಯಿಸಿ, ಕಾರ್ಮಿಕರು ಮನೆಯಿಂದಲೇ ಬೇಡಿಕೆಗಳ ಫಲಕ ಹಿಡಿದು ಮೌನ ಪ್ರತಿಭಟನೆ ನಡೆಸಿದರು.
ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ಸಹಾಯ ಘೋಷಿಸುವಂತೆ ಕಾರ್ಮಿಕರ ಮೌನ ಪ್ರತಿಭಟನೆ ಜಿಲ್ಲೆಯಲ್ಲಿ ವಿವಿಧೆಡೆ ಹಮಾಲಿ ಕಾರ್ಮಿಕರು, ಬಿಸಿಯೂಟ, ಅಂಗನವಾಡಿ ನೌಕರರು, ಗ್ರಾಮ ಪಂಚಾಯಿತಿ ಮತ್ತು ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು. ಸಿಐಟಿಯು ಜಿಲ್ಲಾ ಸಮಿತಿಯಿಂದ ಮುಖ್ಯಮಂತ್ರಿಗೆ ಮೇಲ್ ಮುಖಾಂತರ ಬೇಡಿಕೆಗಳ ಮನವಿ ಕಳುಹಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ತಿಳಿಸಿದ್ದಾರೆ. ಭಾಷಣ ಸಾಕು - ವೇತನ ಬೇಕು, ಉದ್ಯೋಗ ಉಳಿಸಿ - ಆರ್ಥಿಕತೆ ರಕ್ಷಿಸಿ, ಆಹಾರ ಒದಗಿಸಿ - ಬದುಕು ಉಳಿಸಿ, ದಿನದ ಕೆಲಸದ ಅವಧಿ 8 ರಿಂದ 12 ಗಂಟೆ ಹೆಚ್ಚಳ ಬೇಡ ಎಂಬ ಘೋಷವಾಕ್ಯ ಫಲಕ ಹಿಡಿದು ಪ್ರತಿಭಟಿಸಿದರು.ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ಸಹಾಯ ಘೋಷಿಸುವಂತೆ ಕಾರ್ಮಿಕರ ಮೌನ ಪ್ರತಿಭಟನೆ ಇನ್ನು, ಆದಾಯ ರಹಿತ ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ತಿಂಗಳಿಗೆ 7,500 ರೂ. ನಂತೆ ಅವರ ಬ್ಯಾಂಕ್ ಖಾತೆಗಳಿಗೆ 3 ತಿಂಗಳ ಅವಧಿಗೆ ಕೂಡಲೇ ವರ್ಗಾಯಿಸಬೇಕು. ಕೆಲಸದ ಅವಧಿಯನ್ನ 8 ರಿಂದ 12 ಗಂಟೆಗೆ ಹೆಚ್ಚಿಸಬಾರದು. ಕೂಡಲೇ ವಲಸೆ ಕಾರ್ಮಿಕರಿಗೆ ಒಳ್ಳೆಯ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಬೇಕು. ಕೆಲಸದಿಂದ ತೆಗೆಯುವ, ವೇತನ ಕಡಿತ ಮಾಡುವ ಮೂಲಕ ಕೇಂದ್ರ ಸರ್ಕಾರದ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಉದ್ಯೋಗಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ಸಹಾಯ ಘೋಷಿಸುವಂತೆ ಕಾರ್ಮಿಕರ ಮೌನ ಪ್ರತಿಭಟನೆ