ETV Bharat / city

ನೀರಿಗಾಗಿ ಅವಳಿ ನಗರದಲ್ಲಿ ಹಾಹಾಕಾರ: ಸೂಕ್ತ ನಿರ್ಧಾರಕ್ಕೆ ಬರಬೇಕಿದೆ ಸರ್ಕಾರ..!

ನಾಲ್ಕು ದಿನಕ್ಕೊಮ್ಮೆ ಸರಬರಾಜಾಗುತ್ತಿದ್ದ ನೀರು ಒಂದು ವಾರವಾದರೂ ಬಂದಿಲ್ಲ. ಇದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಅನಿಭವಿಸುವಂತಾಗಿದ್ದು, ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾದಂತಾಗಿದ್ದಾರೆ.

water-problem-in-hubli
ನೀರಿಗಾಗಿ ಅವಳಿನಗರದಲ್ಲಿ ಹಾಹಾಕಾರ
author img

By

Published : May 5, 2022, 7:58 PM IST

ಹುಬ್ಬಳ್ಳಿ: ನಮ್ಮ ರಾಜ್ಯದಲ್ಲಿ ಬಹುತೇಕ ಕಡೆ ನೀರು ಸರಬರಾಜು ವ್ಯವಸ್ಥೆಯನ್ನು ಸರ್ಕಾರ ಹಂತ ಹಂತವಾಗಿ ಖಾಸಗೀಕರಣ ಮಾಡುವುದಕ್ಕೆ ಮುಂದಾಗಿದ್ದು, ಅದರ ಮೊದಲ ಹಂತವಾಗಿ ಹುಬ್ಬಳ್ಳಿ - ಧಾರವಾಡ ಅವಳಿ ನಗರದ ನೀರು ಸರಬರಾಜು ಯೋಜನೆ ಜಲಮಂಡಳಿ ಎಲ್ ಅಂಡ್​​ ಟಿ ಕಂಪನಿಗೆ ಹಸ್ತಂತಾರಗೊಳ್ಳುತ್ತಿದೆ. ಆದರೆ, ಇದು ಈಗ ಅವಳಿ ನಗರದ ಜನರು ನೀರಿಗಾಗಿ ಹಾಹಾಕಾರಪಡುವಂತೆ ಮಾಡಿದೆ‌.

ನೀರಿಗಾಗಿ ಅವಳಿನಗರದಲ್ಲಿ ಹಾಹಾಕಾರ

ಹೌದು‌ ಇಷ್ಟು ದಿನ ಜಲಮಂಡಳಿ ಅಡಿಯಲ್ಲಿದ್ದ ಕಾರ್ಮಿಕರನ್ನು ಪುನಃ ಗುತ್ತಿಗೆ ಆಧಾರದ ಮೇಲೆಯೇ ಖಾಸಗಿ ಕಂಪನಿಗೆ ವಹಿಸುವುದಕ್ಕೆ‌ ಮುಂದಾಗಿದ್ದು, ಇದನ್ನು ವಿರೋಧಿಸಿ ಈಗ ಕಾರ್ಮಿಕರು ಮುಷ್ಕರಕ್ಕೆ ಕುಳಿತಿದ್ದಾರೆ. ಇದರಿಂದ ಅವಳಿ ನಗರದ ಜನತಗೆ ಸಮರ್ಪಕವಾದ ನೀರಿನ ಪೂರೈಕೆಯಾಗದೆ ಜಲಮಂಡಳಿ ಹಾಗೂ ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ನಾಲ್ಕು ದಿನಕ್ಕೊಮ್ಮೆ ಸರಬರಾಜಾಗುತ್ತಿದ್ದ ನೀರು ಒಂದು ವಾರವಾದರೂ ಬಂದಿಲ್ಲ. ಇದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಅನಿಭವಿಸುವಂತಾಗಿದ್ದು, ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾದಂತಾಗಿದ್ದಾರೆ. ಅವಳಿ ನಗರದ ನೀರು ಸರಬರಾಜು ಯೋಜನೆಯನ್ನು ಒಂದು ವರ್ಷದ ಹಿಂದೆಯೇ ಎಲ್ ಅಂಡ್​​ ಟಿ ಕಂಪನಿಗೆ ವಹಿಸಲಾಗಿದೆ. ಹೀಗಾಗಿ ಈಗ ಕಂಪನಿ ಇಡೀ ವ್ಯವಸ್ಥೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿದೆ.

ಇದೇ ವೇಳೆ, ಇಷ್ಟು ದಿನ ಜಲಮಂಡಳಿ ಅಡಿ ಇದ್ದ ಅದೇ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಮುಂದಾಗಿದೆ. ಆದರೆ, ಇದಕ್ಕೆ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದ್ದು, ನಮ್ಮನ್ನು ನಿಯೋಜನೆ ಮೇರೆಗೆ ಕಳುಹಿಸಬೇಕು ಎಂದು ಪಟ್ಟು ಹಿಡಿದು ಜಲಮಂಡಳಿ ಎದುರು ಧರಣಿ ಆರಂಭಿಸಿದ್ದಾರೆ. ಇದರಿಂದ ಅವಳಿ ನಗರದ ಜನರು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ.

ಪಾಲಿಕೆಯವರು ನಮ್ಮನ್ನು ಹಂಗಾಮಿ ನೌಕರರೆಂದು ಪರಿಗಣಿಸಿ ನಿಯೋಜನೆ ಮೇರೆಗೆ ಎಲ್ ಅಂಡ್​​ ಟಿ ಕಂಪನಿಗೆ ವಹಿಸಿಕೊಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, ಈ ಕೇಸ್ ಕೋರ್ಟ್​ನಲ್ಲಿ ಇದೆ. ಹೀಗಾಗಿ ಕಾರ್ಮಿಕರು ಕೋರ್ಟ್ ಆದೇಶ ಬರುವವರೆಗೂ ಪ್ರತಿಭಟನೆ ಕೈ ಬಿಟ್ಟು ಕರ್ತವ್ಯಕ್ಕೆ ಬರಬೇಕು. ಕೋರ್ಟ್​ನಲ್ಲಿ ಕೇಸ್​ ನಡೆಯುತ್ತಿರುವುದರಿಂದ ಅಲ್ಲಿಯೇ ಕಾನೂನು ರೀತಿಯಲ್ಲೇ ಹೋರಾಟ ಮಾಡಿ ಎಂದು ಹು - ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಮನವಿ ಮಾಡುತ್ತಿದ್ದಾರೆ‌.

ಸದ್ಯ ಅಧಿಕಾರಿಗಳು ಮತ್ತು ಈ ನೌಕರರ ಮಧ್ಯದ ಹಗ್ಗ ಜಗ್ಗಾಟ ಹಾಗೆಯೇ ಮುಂದುವರೆದಿದ್ದು, ಇದರ ನೇರ ಪರಿಣಾಮ ಈಗ ಅವಳಿ ನಗರದ ಜನರ ಮೇಲಾಗುತ್ತಿದೆ. ಕಳೆದ ಏಪ್ರಿಲ್ 25ರಿಂದ ಜಲಮಂಡಳಿ ಕಚೇರಿ ಎದುರು ಮುಷ್ಕರ ಆರಂಭಿಸಿದ್ದಾರೆ. ತಮಗೆ ನೀಡಿರುವ ಗಡುವಿನ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ನೌಕರರು ನಮಗೆ ಗಡುವು ನೀಡುವ ಬದಲಿಗೆ ಅದೇ ಗಡುವಿನೊಳಗೆ ನಮ್ಮ ಬೇಡಿಕೆ ಈಡೇರಿಸಲಿ. ಇಲ್ಲದೇ ಹೋದಲ್ಲಿ ನಾವು ಮುಷ್ಕರ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ. ಇದರಿಂದ ಮತ್ತಷ್ಟು ಆತಂಕ ಸಾರ್ವಜನಿಕರಿಗೆ ಎದುರಾಗಿದೆ.

ಇದನ್ನೂ ಓದಿ: ಶಬ್ದದ ವಿರುದ್ಧ ಹೋರಾಟ.. 1 ಸಾವಿರ ದೇವಸ್ಥಾನಗಳಲ್ಲಿ ಭಜನೆ, ಸುಪ್ರಭಾತ ಪಠಣದ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.