ಹುಬ್ಬಳ್ಳಿ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ಅವರ ಪತ್ನಿ ಎಂ.ಉಷಾ ಅವರು ಮೂರು ದಿನಗಳ ಕರ್ನಾಟಕ ಪ್ರವಾಸ ಪೂರ್ಣಗೊಳಿಸಿ ಇಂದು ದೆಹಲಿಗೆ ತೆರಳಿದರು. ಹುಬ್ಬಳ್ಳಿಯಿಂದ ವಾಯುಸೇನೆಯ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು.
ವಿಜಯನಗರ ಜಿಲ್ಲೆ ಹೊಸಪೇಟೆಯ ತುಂಗಭದ್ರಾ ಜಲಾಶಯ ಮತ್ತು ಐತಿಹಾಸಿಕ ಹಂಪಿ ಪ್ರವಾಸ ಮುಗಿಸಿ ಇಂದು ಬೆಳಗ್ಗೆ ಹುಬ್ಬಳ್ಳಿಗೆ ಆಗಮಿಸಿದ್ದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ಅವರ ಪತ್ನಿ ಎಂ.ಉಷಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ, ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರಾದ ಲಾಬೂರಾಮ್ ಅವರು ಬರಮಾಡಿಕೊಂಡರು.
ಕೇಂದ್ರ ಸಚಿವ ಜೋಶಿ ಅವರ ಅಣ್ಣ ಗೋವಿಂದ ಜೋಶಿಯವರ ಮಗ ಅಭಯ ಜೋಶಿ ಮದುವೆ ಸಮಾರಂಭದ ಬಳಿಕ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಾಯುಸೇನಾ ವಿಮಾನದ ಮೂಲಕ ದೆಹಲಿಗೆ ಪ್ರಯಾಣಿಸಿದರು.
(ವಿಜಯನಗರ ಭೇಟಿ ಯಶಸ್ವಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನು ಬೀಳ್ಕೊಟ್ಟ ಡಿಸಿ)