ETV Bharat / city

ಹುಬ್ಬಳ್ಳಿ: ಉದ್ಯೋಗ ಕೊಡಿಸುವುದಾಗಿ ಮಹಿಳೆಗೆ 4 ಲಕ್ಷ ರೂ. ವಂಚನೆ, ಇಬ್ಬರು ಗಾಂಜಾ ಮಾರಾಟಗಾರರ ಬಂಧನ - crime cases increase in Hubli

ಹುಬ್ಬಳ್ಳಿ ನಗರದಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಪೊಲೀಸ್​ ಉದ್ಯೋಗ ಕೊಡಿಸುವುದಾಗಿ ಮಹಿಳೆಯೊಬ್ಬರಿಗೆ 4 ಲಕ್ಷ ರೂಪಾಯಿ( Rs 4 Lakh cheat a women)ವಂಚಿಸಿದರೆ, ಡಿಸ್ನಿಲ್ಯಾಂಡ್​ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು(2 Ganja sellers arrest)ಪೊಲೀಸರು ಬಂಧಿಸಿದ್ದಾರೆ.

two ganja sellers arrested
ಇಬ್ಬರು ಗಾಂಜಾ ಮಾರಾಟಗಾರರ ಬಂಧನ
author img

By

Published : Nov 18, 2021, 10:21 AM IST

Updated : Nov 18, 2021, 11:18 AM IST

ಹುಬ್ಬಳ್ಳಿ: ನಗರದಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಪೊಲೀಸ್​ ಉದ್ಯೋಗ ಕೊಡಿಸುವುದಾಗಿ ಮಹಿಳೆಯೊಬ್ಬರಿಗೆ 4 ಲಕ್ಷ ರೂಪಾಯಿ ವಂಚಿಸಿದರೆ(4 Lakh cheat a women), ಡಿಸ್ನಿಲ್ಯಾಂಡ್​ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು (2 Ganja sellers arrest)ಪೊಲೀಸರು ಬಂಧಿಸಿದ್ದಾರೆ.

ವಂಚಕಿ ಕ್ರಿಶ್ಚಿನಾ ಎಂಬುವವರು ಲೈದಿಯಾ ಎಂಬ ಮಹಿಳೆಗೆ ತಾನು ಪಿಎಸ್​ಐ ಎಂದು ನಕಲಿ ಐಡಿ ಕಾರ್ಡ್​ ತೋರಿಸಿ, ನಿಮಗೆ ಪೊಲೀಸ್​ ಕಾನ್​ಸ್ಟೇಬಲ್​ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದಾರೆ. ಇದಕ್ಕಾಗಿ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಹುದ್ದೆಯ ಆಸೆಗಾಗಿ ಲೈದಿಯಾ ತನ್ನ ಪತಿಯ ಫೋನ್​ ಪೇ ಮೂಲಕ ಹಂತ ಹಂತವಾಗಿ 4.15 ಲಕ್ಷ ರೂಪಾಯಿ ಹಣವನ್ನು ಕ್ರಿಶ್ಚಿನಾಗೆ ನೀಡಿದ್ದಾರೆ.

ಇದನ್ನೂ ಓದಿ: ಬೆದರಿಕೆ ಪ್ರಕರಣ: ಭೂಗತ ಪಾತಕಿ ರವಿ ಪೂಜಾರಿ ವಿರುದ್ಧದ ಕೇಸ್​​ ರದ್ದು ಪಡಿಸಿದ ಕೋರ್ಟ್​

ಈ ವೇಳೆ ಕ್ರಿಶ್ಚಿನಾ ಹುದ್ದೆ ಕೊಡಿಸುವ ಸೋಗಿನಲ್ಲಿ ಲೈದಿಯಾಗೆ ನಕಲಿ ಆರ್ಡರ್​ ಕಾಪಿಯೊಂದನ್ನು ನೀಡಿದ್ದಾರೆ. ಆರ್ಡರ್​ ಕಾಫಿ ಪಡೆದ ಬಳಿಕ ಅನುಮಾನ ಬಂದು ಪರಿಶೀಲಿಸಿದಾಗ ಪ್ರಮಾಣ ಪತ್ರ ನಕಲಿ ಎಂದು ಗೊತ್ತಾಗಿದೆ. ಮೋಸ ಹೋದ ಲೈದಿಯಾ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಶ್ಚಿನಾ ವಿರುದ್ಧ ವಂಚನೆ ದೂರು ದಾಖಲಿಸಿದ್ದಾರೆ.

ಇಬ್ಬರು ಗಾಂಜಾ ಮಾರಾಟಗಾರರ ಬಂಧನ

ಇನ್ನೊಂದು ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಇಲ್ಲಿನ ಗಬ್ಬೂರು ಬೈಪಾಸ್ ಡಿಸ್ನಿಲ್ಯಾಂಡ್ ಬಳಿ ಆರ್ಥಿಕ ಮತ್ತು ಮಾದಕ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 28,260 ರೂ. ಮೌಲ್ಯದ 3.626 ಗ್ರಾಂ ಗಾಂಜಾ ಹಾಗೂ 1 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ಡಿಸ್ನಿ ಲ್ಯಾಂಡ್​ ಬಳಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆರ್ಥಿಕ ಮತ್ತು ಮಾದಕ ಅಪರಾಧ ಠಾಣೆ ಇನ್‌ಸ್ಪೆಕ್ಟರ್‌ ಎಂ.ಎಸ್. ಹೂಗಾರ್​, ಪಿಎಸ್‌ಐ ಸದಾಶಿವ ಕಾನಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ವೇಳೆ, ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಆರ್ಥಿಕ ಮತ್ತು ಮಾದಕ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Nov 18, 2021, 11:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.