ಧಾರವಾಡ: ಕೊರೊನಾ ಮಧ್ಯೆಯೂ ಸಂಚಾರಿ ಪೊಲೀಸರೊಬ್ಬರು ತಮ್ಮ ಜನ್ಮದಿನವನ್ನು ಅನೇಕ ಸ್ಥಳಗಳಲ್ಲಿ ಸಸಿ ನೆಡುವ ಮೂಲಕ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಧಾರವಾಡದ ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ ಬಸವರಾಜ ಗುರಿಕಾರ ಎಂಬುವವರು ತಮ್ಮ ಜನ್ಮದಿನವನ್ನು ನಗರದ ಅನೇಕ ಕಡೆಗಳಲ್ಲಿ ವಿವಿಧ ತರಹದ ಸಸಿಗಳನ್ನು ನೆಡುವ ಮೂಲಕ ಆಚರಿಸಿಕೊಂಡಿದ್ದು, ಪರಿಸರ ಪ್ರೇಮ ಮೆರೆಯುವ ಜೊತೆಗೆ ಇತರರಿಗೆ ಮಾದರಿಯಾಗಿದ್ದಾರೆ.
ಬಸವರಾಜ ಅವರ ಸಹೋದ್ಯೋಗಿ ಬಸವರಾಜ ಲಮಾಣಿ ಕೂಡ ತಮ್ಮ ಸ್ನೇಹಿತನ ಜನ್ಮದಿನಕ್ಕೆ ನಗರದ ಟೋಲ್ ನಾಕಾ, ಜ್ಯುಬಿಲಿ ಸರ್ಕಲ್, ಕೋರ್ಟ್ ವೃತ್ತ ಸೇರಿದಂತೆ ಕೆಲವು ಕಡೆಗಳಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಅಲ್ಲದೆ ಜ್ಯುಬಿಲಿ ವೃತ್ತದ ಬಳಿ ಇರುವ ಆಟೋ ನಿಲ್ದಾಣದ ಹತ್ತಿರ ನೇರಳೆ ಹಣ್ಣಿನ ಸಸಿ ನೆಡುವಂತೆ ಆಟೋ ಚಾಲಕರಿಗೆ ಸಸಿಗಳನ್ನು ನೀಡಲಾಯಿತು.