ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತಿಷ್ಟಿತ ಮೂರುಸಾವಿರ ಮಠದಲ್ಲಿ ನಾಳೆಯಿಂದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಸತ್ಯದರ್ಶನ ಸಭೆಗೆ ಪೊಲೀಸರ ಅನುಮತಿ ಕೋರಿ ಸ್ವಾಮೀಜಿ ಬೆಂಬಲಿಗರು ಹು-ಧಾ ಮಹಾನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಹಿನ್ನೆಲೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿಯವರ ಕುರಿತಾಗಿ ಅಪಪ್ರಚಾರ ಮಾಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲು ಹಾಗೂ ಜನರಿಗೆ ಸತ್ಯ ದರ್ಶನ ಮಾಡಲು ಫೆಬ್ರವರಿ 23 ಭಾನುವಾರದಂದು ಸತ್ಯ ದರ್ಶನ ಬಹಿರಂಗ ಸಭೆಯನ್ನು ಆಯೋಜಿಸಲಾಗಿದೆ. ಈ ಕುರಿತು ಅವಕಾಶ ಹಾಗೂ ಅನುಮತಿ ಕಲ್ಪಿಸಬೇಕು ಎಂದು ಹು-ಧಾ ಮಹಾನಗರ ಪೊಲೀಸ್ ಉಪ ಆಯುಕ್ತ ಕೃಷ್ಣಕಾಂತ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಿದರು.